ಮಡಿಕೇರಿ, ನ. ೧೧ : ಕೊಡಗು ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿಯಾದ ಬಳಿಕ ಮೆಲ್ಲ ಮೆಲ್ಲಗೆ ಸಂಚಾರ ಆರಂಭ ಗೊಳ್ಳುತ್ತಿದ್ದ ಖಾಸಗಿ ಬಸ್‌ಗಳ ಸಂಚಾರದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಕೊಡಗು ಗುಡ್ಡಗಾಡು ಜಿಲ್ಲೆಯಾಗಿದ್ದು, ಇಲ್ಲಿ ಬಹುತೇಕ ಖಾಸಗಿ ಬಸ್‌ಗಳನ್ನು ಜನತೆ ಅವಲಂಭಿಸುತ್ತಿರುವುದು ಹಿಂದಿನಿAದಲೂ ಅನಿವಾರ್ಯತೆಯ ರೀತಿಯಲ್ಲಿ ಮುಂದುವರಿಯುತ್ತಿದೆ. ಕಳೆದ ಏಪ್ರಿಲ್ ಅಂತ್ಯದಿAದ ಕೊರೊನಾ ಕಾರಣದಿಂದಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಎಲ್ಲಾ ಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತು.

ಈ ಸನ್ನಿವೇಶದಲ್ಲಿ ಬಸ್ ಮಾಲೀಕರು ತಮ್ಮ ಬಸ್‌ಗಳನ್ನು ಇಲಾಖೆಗೆ ಶರಣಾಗತಿಯಲ್ಲಿಟ್ಟಿದ್ದರು. ಕೆಲವು ತಿಂಗಳುಗಳ ಕಾಲ ಲಾಕ್‌ಡೌನ್ ನಿರ್ಬಂಧವಿತ್ತು. ಬಳಿಕ ಇದು ಹಂತ ಹಂತವಾಗಿ ತೆರವುಗೊಂಡ ಬಳಿಕ ಖಾಸಗಿ ಬಸ್‌ಗಳ ಸಂಚಾರ ಮೆಲ್ಲ ಮೆಲ್ಲನೆ ಆರಂಭಗೊAಡಿತ್ತಾದರೂ ಎಲ್ಲಾ ಬಸ್‌ಗಳು ರಸ್ತೆಗಿಳಿದಿರಲಿಲ್ಲ. ಜನರ ಓಡಾಟ ಕಡಿಮೆ ಇದ್ದುದು, ಶಾಲಾ - ಕಾಲೇಜುಗಳಿಗೆ ರಜೆ, ದುಬಾರಿ ಡೀಸಲ್ ದರ ಸೇರಿದಂತೆ ಅಧಿಕ ನಿರ್ವಹಣಾ ವೆಚ್ಚದಿಂದಾಗಿ ಹಲವಷ್ಟು ಮಾಲೀಕರು ಬಸ್‌ಗಳನ್ನು ಓಡಿಸಲು ಮುಂದಾಗಿರಲಿಲ್ಲ.

ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ೧೪೯ ಖಾಸಗಿ ಬಸ್‌ಗಳು ಇವೆ. ಇವುಗಳ ಪೈಕಿ ಕೆಲವಾರು ಬಸ್‌ಗಳನ್ನು ನಷ್ಟದ ನಡುವೆಯೂ ಸಂಕಷ್ಟದಲ್ಲಿ ಓಡಿಸಲು ಮಾಲೀಕರು ಮುಂದಾಗಿದ್ದರು. ೧೪೯ ಬಸ್‌ಗಳ ಪೈಕಿ ೧೦೨ ಬಸ್‌ಗಳು ಸಂಚಾರ ಆರಂಭಿಸಿದ್ದವು. ಆದರೆ ಜಿಲ್ಲೆಯಲ್ಲಿನ ಹವಾಮಾನ ವೈಪರೀತ್ಯ, ಜನರ ಓಡಾಟದಲ್ಲಿ ಇಳಿಮುಖ ಮತ್ತಿತರ ಕಾರಣಗಳಿಂದಾಗಿ ಸಂಚಾರ ಆರಂಭಿಸಿದ್ದ ಕೆಲವಾರು ಬಸ್‌ಗಳು ಮತ್ತೆ ಸಂಚಾರ ಸ್ಥಗಿತಗೊಳಿಸಿವೆ. ಇದೀಗ ಕೇವಲ

(ಮೊದಲ ಪುಟದಿಂದ) ೬೫ ಬಸ್‌ಗಳು ಮಾತ್ರ ಓಡಾಟ ನಡೆಸುತ್ತಿದ್ದು, ಸಂಚಾರ ಆರಂಭಿಸಿದ್ದ ಇತರ ಬಸ್‌ಗಳನ್ನು ಮಾಲೀಕರು ಮತ್ತೆ ಇಲಾಖೆಗೆ ಶರಣಾಗತಿಯಲ್ಲಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಡೀಸಲ್ ದರದಲ್ಲಿ ಒಂದಷ್ಟು ಇಳಿಕೆಯಾಗಿದೆ. ಈ ಕಾರಣದಿಂದಾಗಿ ಶರಣಾಗತಿಯಲ್ಲಿರುವ ಕೆಲವು ಬಸ್‌ಗಳು ಮತ್ತೆ ರಸ್ತೆಗಿಳಿಯಬಹುದೆಂದು ನಿರೀಕ್ಷಿಸಲಾಗಿದೆ. ಆದರೆ, ಈ ಬಗ್ಗೆ ಮಾಲೀಕರು ಇನ್ನೂ ನಿರ್ಧಾರಕ್ಕೆ ಬಂದAತಿಲ್ಲ. ಕರ್ನಾಟಕದಲ್ಲಿ ಬಸ್‌ಗಳನ್ನು ನಿಲುಗಡೆಗೊಳಿಸಿದ ಅವಧಿಯಲ್ಲಿ ಮಾತ್ರ ತೆರಿಗೆ ವಿನಾಯಿಸಿ ಸಿಗುತ್ತಿರುವದರಿಂದ, ಬಸ್ ಹೊಂದಿರುವವರು ಹಿಂದೆ - ಮುಂದೆ ನೋಡುವಂತಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ ಸಂಪರ್ಕಗಳಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.