ಮಡಿಕೇರಿ, ನ. ೯: ತಲಕಾವೇರಿ ಕ್ಷೇತ್ರವನ್ನು ಪ್ರವಾಸಿ ಕೇಂದ್ರಗಳ ಪಟ್ಟಿಯಿಂದ ಕೈಬಿಡಬೇಕು ಹಾಗೂ ಭಾಗಮಂಡಲ ಪಟ್ಟಣವನ್ನು ದೇಗುಲ ಪಟ್ಟಣ (ಟೆಂಪಲ್ ಟೌನ್) ಎಂದು ಪರಿವರ್ತಿಸಬೇಕೆಂದು ಒತ್ತಾಯಿಸಿ ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಹಾಗೂ ಮಡಿಕೇರಿಯ ತಿರಿಬೊಳ್‌ಚ ಕೊಡವ ಸಂಘ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದೆ.

ರಾಜ್ಯ ಸರಕಾರ ತಲಕಾವೇರಿ ಕ್ಷೇತ್ರವನ್ನು ಪ್ರವಾಸಿ ತಾಣ ಎಂದು ಗುರುತಿಸಿದೆ. ಇದರಿಂದ ಪ್ರವಾಸಿಗರು ಧಾರ್ಮಿಕ ಭಾವನೆ ಮರೆಯುತ್ತಿದ್ದು, ಕ್ಷೇತ್ರದ ಘನತೆಗೆ ಧಕ್ಕೆ ಬಂದಿದೆ.

(ಮೊದಲ ಪುಟದಿಂದ) ಜೊತೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಈಜುವುದು, ಮೋಜು ಮಸ್ತಿ ಮಾಡುವುದು, ಅಲ್ಲಿಯೇ ಅಡುಗೆ ತಯಾರಿಸಿ ಸೇವಿಸುವುದನ್ನು ತಡೆಯಲು ಬಿಗಿಕ್ರಮ ಕೈಗೊಳ್ಳಬೇಕು. ಪುಣ್ಯಕ್ಷೇತ್ರಗಳ ಮೂಲಸ್ವರೂಪ ಉಳಿಸಬೇಕು. ಸಹಸ್ರಾರು ಭಕ್ತರು ದಿನನಿತ್ಯ ಭಾಗಮಂಡಲದ ಭಗಂಡೇಶ್ವರ ಸನ್ನಿದ್ಧಿಗೆ ಆಗಮಿಸುತ್ತಾರೆ. ಹಾಗಾಗಿ ಆ ವ್ಯಾಪ್ತಿಯಲ್ಲಿ ಮಾಂಸ, ಮದ್ಯ ವ್ಯಾಪಾರ ಹಾಗೂ ಮಾಂಸಾಹಾರಿ ಹೊಟೇಲ್‌ಗಳನ್ನು ಸ್ಥಗಿತಗೊಳಿಸಿ ‘ಟೆಂಪಲ್ ಟೌನ್’ ಎಂದು ಘೋಷಿಸಬೇಕು ಎಂದು ಮನವಿ ಮಾಡಿದೆ.

ಈ ಸಂದರ್ಭ ವೇದಿಕೆಯ ಸಂಚಾಲಕ ಕೊಕ್ಕಲೆರ ಕಾರ್ಯಪ್ಪ, ಪ್ರಮುಖರಾದ ಉಳ್ಳಿಯಡ ಪೂವಯ್ಯ, ಕಿರಿಯಮಾಡ ರತನ್ ತಮ್ಮಯ್ಯ, ತಿರಿಬೊಳ್‌ಚ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ, ಕಾರ್ಯದರ್ಶಿ ಕಾಳೇಂಗಡ ಸಾವಿತ್ರಿ ಮುತ್ತಪ್ಪ ಇದ್ದರು.