ಶನಿವಾರಸಂತೆ, ನ. ೯: ಬೈಕಿನಲ್ಲಿ ಬರುತ್ತಿದ್ದ ಇಬ್ಬರು ದಲಿತ ಯುವಕರನ್ನು ಅಡ್ಡಗಟ್ಟಿ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳು ಯುವಕರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಹಲ್ಲೆ ಪ್ರಕರಣದ ಇತರ ಎಲ್ಲಾ ಆರೋಪಿಗಳನ್ನು ಬಂಧಿಸುವAತೆ ಹಾಗೂ ಆರೋಪಿಗಳ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮತ್ತು ದಲಿತ ಪ್ರಮುಖರು ಶನಿವಾರಸಂತೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ತಾ. ೭ ರಂದು ಮಧ್ಯಾಹ್ನ ದೊಡ್ಡಹಣಕೋಡು ಗ್ರಾಮದ ಡಿ.ವಿ. ನಂದನ್ ಸ್ನೇಹಿತ ಗೌಡಳ್ಳಿ ಗ್ರಾಮದ ಸಂದೇಶ್ ಅವರುಗಳು ಬೈಕಿನಲ್ಲಿ ಕೊಡ್ಲಿಪೇಟೆಯ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಾಪಸಾಗುತ್ತಿದ್ದ ವೇಳೆ ಶನಿವಾರಸಂತೆ ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಹತ್ತಿರ ಬೈಕನ್ನು ಕಾರಿನಲ್ಲಿ ಅಡ್ಡಗಟ್ಟಿದ ಶನಿವಾರಸಂತೆಯ ಯುವಕರ ತಂಡ ನಂದನ್ ಮತ್ತು ಸಂದೇಶ್ ಅವರುಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬAಧ ಆರೋಪಿಗಳಾದ ಜಾಕೀರ್, ಅಜರ್, ಮುಜಾಹಿದ್, ರಶೀದ್ ಇತರರ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸೋಮವಾರ ಜಾಕೀರ್‌ನನ್ನು ಬಂಧಿಸಿದ್ದಾರೆ.
ಮAಗಳವಾರ ಬೆಳಿಗ್ಗೆ ಶನಿವಾರಸಂತೆ ಸುತ್ತಮುತ್ತಲಿನ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮತ್ತು ದಲಿತ ಮುಖಂಡರು ಶನಿವಾರಸಂತೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಹಿಂದೂ ಸಂಘಟನೆಯ ಪ್ರಮುಖ ಎಸ್.ಎಸ್. ರಘು ಮಾತನಾಡಿ, ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದು, ಅಮಾಯಕರ ಮೇಲೆ ಹಲ್ಲೆ ನಡೆಸುತ್ತಿರುತ್ತಾರೆ. ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ಪೊಲೀಸರು ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದು, ಹಲ್ಲೆ ನಡೆಸಿದ ಇತರ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು. ದಲಿತ ಯುವಕರ ಮೇಲೆ ಹಲ್ಲೆ ನಡೆಸಿರುವುದರಿಂದ ಆರೋಪಿಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದರು.
ಈ ಕುರಿತು ಪ್ರತಿಭಟನೆಗಾರರು ಮನವಿ ಪತ್ರವನ್ನು ವೃತ್ತನಿರೀಕ್ಷಕ ಮನವೊಲಿಸಿದರು. ಮಧ್ಯಾಹ್ನದ ನಂತರ ಗುರುವಾರದೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪ್ರತಿಭಟನೆಯನ್ನು ಕೈಬಿಟ್ಟರು.
ದಲಿತ ಮುಖಂಡ ಪ್ರತಾಪ್ ಮಾತನಾಡಿದರು. ದಲಿತ ಪ್ರಮುಖ ರಾಮಕೃಷ್ಣ, ಹಿಂದೂಪರ ಸಂಘಟನೆಯ ಪ್ರಮುಖರಾದ ಹರೀಶ್‌ಕುಮಾರ್, ಪುನಿತ್, ಧನಂಜಯ್, ಜಾಗೆನಹಳ್ಳಿ ಸುರೇಶ್, ಕುಮಾರ್, ಪ್ರಸನ್ನ, ಮನು, ನಿತಿನ್, ರಕ್ಷಿತ್, ಸಚಿನ್, ಮಹೇಶ್, ವಿನಯ್, ನವೀನ್ ಮುಂತಾದ ನೂರಕ್ಕಿಂತ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿದ್ದರು.