ಮಡಿಕೇರಿ, ನ. ೯: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೧ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೇರಿಯನ, ಉಳುವಾರನ, ಪೊಡನೊಳನ ಕುಟುಂಬ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿವೆ.
ಇಂದು ನಡೆದ ಐದು ಓವರ್‌ಗಳ ಸಿಮೀತ ಪಂದ್ಯಾವಳಿಯಲ್ಲಿ ಕೋಳಿಮಾಡು ತಂಡ ೫೨ ರನ್ ಗಳಿಸಿದರೆ, ಊರುಬೈಲು ತಂಡ ಒಂದು ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಕೊಳಂಬೆ ತಂಡ ೮೨ ರನ್ ಗಳಿಸಿದರೆ, ಬೈತಡ್ಕ ತಂಡ ಕೂಡ ೮೨ ರನ್ ಗಳಿಸಿ ಪಂದ್ಯಾಟ ಸಮಬಲ ಸಾಧಿಸಿತು. ನಂತರ ಸೂಪರ್‌ಓವರ್‌ನಲ್ಲಿ ಕೊಳಂಬೆ ತಂಡ ಗೆಲುವು ಸಾಧಿಸಿತು. ಕೊಳಂಬೆ ಮಧು ೭೦ ರನ್ ಗಳಿಸಿ, ಗಮನ ಸೆಳೆದರು. ಕೊಂಬAಡ ತಂಡ ೪೧ ರನ್ ಗಳಿಸಿದರೆ, ಮೊಟ್ಟನ ತಂಡ ೪೦ ರನ್ ಗಳಿಸಿ ಕೇವಲ ೧ ರನ್ ಅಂತರದಲ್ಲಿ ಸೋಲನುಭವಿಸಿತು. ನಿಡ್ಯಮಲೆ ತಂಡ ಕೇವಲ ೧೨ ರನ್ ಗಳಿಸಿದರೆ, ಉಳುವಾರನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯಗಳಿಸಿತು. ಬಳ್ಳಡ್ಕ ತಂಡ ೪೮ರನ್ ಗಳಿಸಿದರೆ, ಮುದಿಯಾರು ತಂಡ ೩೯ ರನ್‌ಗಳಿಸಿ ಸೋಲನುಭವಿಸಿತು. ಪೇರಿಯನ ತಂಡ ೬೫ ರನ್ ಗಳಿಸಿದರೆ, ಕೊಂಬAಡ ತಂಡ ೨೧ರನ್ ಗಳಿಸಿ ಸೋಲನುಭ ವಿಸಿತು. ಕರ್ಣಯ್ಯನ ತಂಡ ೪೦ ರನ್ ಗಳಿಸಿದರೆ, ಊರುಬೈಲು ತಂಡ ೩೮ ರನ್ ಗಳಿಸಿ ಸೋಲನುಭವಿಸಿತು.
ಮತ್ತೊಂದು ಪಂದ್ಯದಲ್ಲಿ ಬಡುವಂಡ್ರ ತಂಡ ೭೧ ರನ್ ಗಳಿಸಿದರೆ, ಕೊಳಂಬೆ ತಂಡ ೭೫ ರನ್ ಗಳಿಸಿ ಏಳು ವಿಕೆಟ್‌ಗಳ ಜಯ ಸಂಪಾದಿಸಿತು. ಪೊಡನೊಳನ ತಂಡ ೫೮ ರನ್ ಗಳಿಸಿದರೆ, ಬಳ್ಳಡ್ಕ ತಂಡ ೨೯ ರನ್ ಗಳಿಸಿ ಸೋಲನುಭವಿಸಿತು.
ಕರ್ಣಯ್ಯನ ತಂಡ ೨೭ ರನ್ ಗಳಿಸಿದರೆ, ಪೇರಿಯನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು. ಕೊಳಂಬೆ ತಂಡ ೨೮ರನ್ ಗಳಿಸಿದರೆ, ಉಳುವಾರನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಕಡ್ಲೇರ ತಂಡ ೪೨ ರನ್ ಗಳಿಸಿದರೆ, ಉಳುವಾರನ ತಂಡ ೮ ವಿಕೆಟ್ ಗಳ ಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.