ಮಡಿಕೇರಿ, ನ. ೧೦: ೨೦೧೫ರ ನ. ೧೦ರಂದು ಟಿಪ್ಪು ಜಯಂತಿ ಗಲಭೆಯಲ್ಲಿ ಸಾವನ್ನಪ್ಪಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ದೇವಪಂಡ ಕುಟ್ಟಪ್ಪ ಸ್ಮರಣಾರ್ಥ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ವೇದಿಕೆ ಮಡಿಕೇರಿ, ನ. ೧೦: ೨೦೧೫ರ ನ. ೧೦ರಂದು ಟಿಪ್ಪು ಜಯಂತಿ ಗಲಭೆಯಲ್ಲಿ ಸಾವನ್ನಪ್ಪಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ದೇವಪಂಡ ಕುಟ್ಟಪ್ಪ ಸ್ಮರಣಾರ್ಥ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ವೇದಿಕೆ ಗಳಿಂದ ಪೂಜೆ ನೆರವೇರಿಸ ಲಾಯಿತು. ಈ ನಡುವೆ ನಿಷೇಧಾಜ್ಞೆ ಉಲ್ಲಂಘಿಸಿದ ೬೬ ಮಂದಿಯನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ ಘಟನೆಯೂ ನಡೆಯಿತು.

ಹಿಂದೂಪರ ಸಂಘಟನೆಗಳು ನಗರದಲ್ಲಿ ಕುಟ್ಟಪ್ಪ ಸ್ಮರಣೆ ಹಾಗೂ ಜನಜಾಗೃತಿ ಸಭೆಯನ್ನು ಹಮ್ಮಿ ಕೊಂಡಿದ್ದ ಹಿನ್ನೆಲೆಯಲ್ಲಿ ಮುಂಜಾ ಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ನಿನ್ನೆ ದಿನ ಸಂಜೆ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಸರ್ಪ ಗಾವಲನ್ನು ನಿಯೋಜಿಸಲಾಗಿತ್ತು. ಓಂಕಾರೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯ ವ್ಯಾಪ್ತಿ ಸಂಪೂರ್ಣ ಪೊಲೀಸ್ ಕಣ್ಗಾವಲಿ ನಲ್ಲಿತ್ತು. ಇಂದು ಬೆಳಿಗ್ಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮೊದಲಿಗೆ ಓಂಕಾರೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಹೊರ ಬರುತ್ತಿದ್ದಂತೆ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಪೊಲೀಸರು ವಿಶ್ವ ಹಿಂದೂ ಪರಿಷತ್ ಮುಖಂಡ ವಕೀಲ ಕೃಷ್ಣಮೂರ್ತಿ, ಸುರೇಶ್ ಮುತ್ತಪ್ಪ, ಅಜಿತ್ ಕುಮಾರ್, ಪುದಿಯೊಕ್ಕಡ ರಮೇಶ್, ನಗರಸಭಾ ಸದಸ್ಯ ಅರುಣ್ ಶೆಟ್ಟಿ ಸೇರಿದಂತೆ ೧೪ ಮಂದಿಯನ್ನು ಬಂಧಿಸಿದರು.

ಈ ವೇಳೆ

(ಮೊದಲ ಪುಟದಿಂದ) ಕೃಷ್ಣಮೂರ್ತಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತಾದರೂ, ಕೊನೆಗೆ ಪೊಲೀಸ್ ಪಡೆ ಸುಮಾರು ೧೪ ಮಂದಿಯನ್ನು ಬಂಧಿಸಿತು.

ಬಳಿಕ ಚೌಡೇಶ್ವರಿ ದೇವಾಲಯದಲ್ಲೂ ಪೂಜೆ ಸಲ್ಲಿಸಿದ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಸೇರಿ ಕೆಲಹೊತ್ತು ಸಭೆ ನಡೆಸಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಹಿಂದೂ ಜಾಗರಣಾ ವೇದಿಕೆ ಕಾರ್ಯದರ್ಶಿ ಮಹೇಶ್ ಇವರುಗಳು ಮಾತನಾಡಿ, ನಿಷೇಧಾಜ್ಞೆ ಜಾರಿಗೊಳಿಸಿ ಕಾರ್ಯಕ್ರಮಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅಲ್ಲಿಂದ ಮೆರವಣಿಗೆ ನಡೆಸಲು ಮುಂದಾದರು. ಈ ಸಂದರ್ಭ ಪೊಲೀಸರು ತಡೆಯಲು ಮುಂದಾದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಯಾವ ಕಾರಣಕ್ಕಾಗಿ ನಿಷೇಧಾಜ್ಞೆ ಜಾರಿ ಮಾಡಿದ್ದೀರಿ; ನಿಮ್ಮ ಕ್ರಮ ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಹಿಂದೂ ಜಾಗರಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ಮತ್ತಿತರರು ಪೊಲೀಸರ ವಿರುದ್ಧ ಹರಿಹಾಯ್ದರಾದರೂ, ಪೊಲೀಸರು ಮೆರವಣಿಗೆಗೆ ಅವಕಾಶ ನೀಡದೆ ರಾಬಿನ್ ದೇವಯ್ಯ, ಕುಕ್ಕೇರ ಅಜಿತ್, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಸಭಾ ಸದಸ್ಯ ಅಪ್ಪಣ್ಣ, ಉಮೇಶ್ ಸುಬ್ರಮಣಿ ಸೇರಿದಂತೆ ೩೨ ಮಂದಿಯನ್ನು ಬಂಧಿಸಿದರು. ಜನ ಜಾಗೃತಿ ಸಭೆಗೆ ವೀರಾಜಪೇಟೆ ಭಾಗದಿಂದ ಮಡಿಕೇರಿಗೆ ಬರುತ್ತಿದ್ದ ೨೦ ಮಂದಿಯನ್ನು ವೀರಾಜಪೇಟೆ ರಸ್ತೆಯ ರಮ್ಯಾ ಸರ್ವಿಸ್ ಸ್ಟೇಷನ್ ಸಮೀಪ ಬಂಧಿಸಲಾಯಿತು. ಮಧ್ಯಾಹ್ನ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಜಿಲ್ಲೆಯ ವಿವಿಧೆಡೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳೊAದಿಗೆ, ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್, ಜಿಲ್ಲಾ ಸಶಸ್ತç ಪಡೆ, ಅಪರಾಧ ಪತ್ತೆದಳ, ಸಿವಿಲ್ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಭೆ ಆಯೋಜನೆಗೊಂಡಿದ್ದ ಗಾಂಧಿ ಮೈದಾನ ಸೇರಿದಂತೆ ನಗರದೆಲ್ಲೆಡೆ ಎಸ್ಪಿ ಕ್ಷಮಾ ಮಿಶ್ರಾ ನಿರ್ದೇಶನದಂತೆ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಚೌಡೇಶ್ವರಿ ದೇವಾಲಯದ ಬಳಿ ಅಲ್ಲಿನ ಬೆಳವಣಿಗೆಗಳನ್ನು ವೀಡಿಯೋ ಮಾಡುತ್ತಿದ್ದ ಯುವಕನೊಬ್ಬನನ್ನೂ ಪೊಲೀಸರು ಹಿಡಿದು ಮೊಬೈಲ್ ಅನ್ನು ವಶಕ್ಕೆ ತೆಗೆದುಕೊಂಡ ಘಟನೆಯೂ ನಡೆಯಿತು. ಚೆಟ್ಟಳ್ಳಿ ಭಾರತೀಯ ಜನತಾ ಪಕ್ಷದ ವತಿಯಿಂದ ದೇವಪಂಡ ಕುಟ್ಟಪ್ಪ ಅವರಿಗೆ ಚೆಟ್ಟಳ್ಳಿ ನರೇಂದ್ರ ಮೋದಿ ಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಚೆಟ್ಟಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬಲ್ಲಾರಂಡ ಕಂಠಿ ಕಾರ್ಯಪ್ಪ, ಬಿಜೆಪಿ ಶಕ್ತಿಕೇಂದ್ರದ ಸಹಪ್ರಮುಖ್ ರವಿ ಎನ್.ಎಸ್, ತಾಲೂಕು ಬಿಜೆಪಿ ಕಾರ್ಯದರ್ಶಿ ಮೇರಿಅಂಬುದಾಸ್, ಒಬಿಸಿ ಅಧ್ಯಕ್ಷ ಸುನಿಲ್, ತಾಲೂಕು ಬಿಜೆಪಿ ಸದಸ್ಯ ಮರದಾಳು ಹರಿ, ಯುವ ಮೋರ್ಚಾದ ಅಧ್ಯಕ್ಷ ಸಿದ್ದಿಕಲ್ ಅರುಣ ಮತ್ತಿತರರಿದ್ದರು.

ಪೊನ್ನಂಪೇಟೆ : ಪೊನ್ನಂಪೇಟೆ ಶಕ್ತಿ ಕೇಂದ್ರದ ವತಿಯಿಂದ ದೇವಪಂಡ ಕುಟ್ಟಪ್ಪ ಸ್ಮರಣಾರ್ಥ ಇಂದು ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧುಕುಮಾರ್, ಕೋಟೇರ ಕಿಶನ್ ಉತಪ್ಪ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಶಮಿ ಸದಾ, ಸದಸ್ಯರಾದ ರಾಮಕೃಷ್ಣ, ಪೊನ್ನಂಪೇಟೆ ರೈತ ಮೋರ್ಚಾದ ಅಧ್ಯಕ್ಷ ಮೂಕಳೇರ ದಿಲ್ ಕುಮಾರ್, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರುಗಳಾದ ಕೆ.ಬಿ.ವಿನು, ವೆಂಕಟೇಶ, ಜನಾರ್ಧನ್, ಭವಿಷ್, ಮಚ್ಚಮಾಡ ಮಂಜು, ಮನು, ಚೆಪ್ಪುಡಿರ ರಾಧಿಕಾ, ಸುನಂದಾ, ಮನೋಜ್, ಪ್ರಧಾನ್ ಹಾಜರಿದ್ದರು.