ಕುಶಾಲನಗರ, ನ. ೧೦: ಕುಶಾಲನಗರ ಐತಿಹಾಸಿಕ ದೇವಾಲಯ ಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವ ತಾ. ೨೩ ರಂದು ನಡೆಯಲಿದೆ.

ದೇವಾಲಯ ಸೇವಾ ಸಮಿತಿ ಆಡಳಿತ ಮಂಡಳಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಕೊರೊನಾ ಹಿನ್ನೆಲೆ ಸರಳ ಸಾಂಕೇತಿಕ ಹಾಗೂ ಸಾಂಪ್ರದಾಯಿಕವಾಗಿ ಜಾತ್ರೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ. ಗೋಪ್ರದರ್ಶನ ಮತ್ತು ಜಾತ್ರೆಗೆ ಅನುಮತಿ ದೊರೆಯದ ಕಾರಣ ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉಳಿದಂತೆ ಧಾರ್ಮಿಕ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕುಶಾಲನಗರ ಗಣಪತಿ ದೇವಾಲಯದ ಗೋಪುರದ ೧೩ನೇ ವರ್ಷದ ವಾರ್ಷಿಕೋತ್ಸವ ತಾ. ೧೧ ರಂದು (ಇಂದು) ಸರಳವಾಗಿ ನಡೆಯಲಿದ್ದು, ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.