ಗೋಣಿಕೊಪ್ಪ ವರದಿ, ನ. ೯: ಪ್ರೊಫೆಷನಲ್ ಚೆಸ್ ಕ್ಲಬ್ ಮತ್ತು ವೈಸ್‌ಮನ್ ಕ್ಲಬ್ ಸಹಯೋಗದಲ್ಲಿ ಗೋಣಿಕೊಪ್ಪ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪೊನ್ನಿಮಾಡ ಬೋಜಮ್ಮ, ನಮನ ಅಯ್ಯಪ್ಪ ಅತ್ಯುತ್ತಮ ಕಿರಿಯ ಆಟಗಾರ ಪ್ರಶಸ್ತಿ ಪಡೆದರು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಮರ್ಥ (ಪ್ರ) ಶಶಾಂಕ್ ನಾಣಯ್ಯ (ದ್ವಿ), ಶೃದ್ಧ ಆಚಾರ್ಯ (ತೃ), ದಾನ ನಾಲ್ಕನೇ ಬಹುಮಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಅನಿಫ (ಪ್ರ), ಲಿಜೊಜಿಮ್ಸ್ ಎ. ಹರೀಶ ತೃತೀಯ, ಮುಕ್ತ ವಿಭಾಗದಲ್ಲಿ ಅಗಸ್ತö್ಯ (ಪ್ರ), ಶ್ರೀನಿವಾಸ್ (ದ್ವಿ), ನಾಗೇಂದ್ರಪ್ರಸಾದ್ (ತೃ), ಜೀವನ್ ನಾಲ್ಕನೇ ಬಹುಮಾನ ಪಡೆದುಕೊಂಡರು. ೭೦ ಸ್ಪರ್ಧಿಗಳು ಭಾಗವಹಿಸಿದ್ದರು.

ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಉದ್ಘಾಟಿಸಿದರು. ವಕೀಲ ಕಳ್ಳಿಚಂಡ ಅಪ್ಪಣ್ಣ, ತಾ.ಪಂ. ಮಾಜಿ ಸದಸ್ಯ ಕೋಳೇರ ದಯಾ ಚೆಂಗಪ್ಪ, ದಾನಿ ಮಹೇಶ್, ಪ್ರೊಫೆಷನಲ್ ಚೆಸ್ ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ಕಾರ್ಯದರ್ಶಿ ಆಂಟೋನಿ ಇದ್ದರು.