ಭಾಗಮಂಡಲ, ನ. ೯: ಕಾವೇರಿ ತೀರ್ಥೋದ್ಭವದ ಹದಿನೈದು ದಿನಗಳ ಬಳಿಕ ಬರುವ ಮಂಗಳವಾರದAದು ವರ್ಷಂಪ್ರತಿ ನಡೆದುಕೊಂಡು ಬರುತ್ತಿರುವ ಚಾಮುಂಡಿ ಉತ್ಸವ ಇಂದು ಶ್ರದ್ಧಾಭಕ್ತಿಯಿಂದ ಜರುಗಿತು.
ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಚಾಮುಂಡಿ ಕಣದಲ್ಲಿ ನಡೆದ ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಿನ್ನೆ ದಿನ ನಿಡ್ಯಮಲೆ ಕುಟುಂಬಸ್ಥರ ವತಿಯಿಂದ ನಿಡ್ಯ ಮಲೆ ಐನ್ ಮನೆಯಲ್ಲಿ ಗುಳಿಗನ ಕೋಲ ನಡೆದ ಬಳಿಕ ಇಂದು ತಕ್ಕರಾದ ಬಳ್ಳಡ್ಕಅಪ್ಪಾಜಿ ಅವರ ಉಸ್ತುವಾರಿಯಲ್ಲಿ ದೇವಸ್ಥಾನದ ವತಿಯಿಂದ ಚಾಮುಂಡಿ ಕೋಲ ನಡೆಯಿತು. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬAದಿದ್ದು ವಿಶೇಷ ಎನಿಸಿತು.
-ಸುನಿಲ್