ವರದಿ : ಕೆ.ಎಸ್. ಮೂರ್ತಿ
ಕಣಿವೆ, ನ. ೯: ಕೈಗಾರಿ ಕೋದ್ಯಮಿಗಳು, ಸ್ಥಳೀಯ ಉದ್ಯಮಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಮಕ್ಕಳ ಹೆಸರಿನಲ್ಲಿ ಲಕ್ಷಾಂತರ ರೂ. ಹಣವನ್ನು ಸಂಗ್ರಹಿಸಿ ಯಾಮಾರಿಸುತ್ತಿರುವ ವಿನೂತನ ಮಾದರಿಯ ಸೈಬರ್ ದಂಧೆ ಕುಶಾಲನಗರ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿನ ಪೆಟ್ರೋಲ್ ಬಂಕ್ ಮಾಲೀಕರು, ಆಗ್ರೋ ಸೆಂಟರ್ ಮಾಲೀಕರು, ಖಾಸಗಿ ಬ್ಯಾಂಕುಗಳ ಕ್ಯಾಷಿಯರ್‌ಗಳು ಸೇರಿದಂತೆ ಕೆಲವು ಹಣವಂತರು ಈ ಸೈಬರ್ ಖದೀಮರ ಕರಾಮತ್ತಿಗೆ ಒಳಗಾಗಿ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೂಡ್ಲೂರು ಕೈಗಾರಿಕಾ ಬಡಾವಣೆಯೊಂದರ ಪೆಟ್ರೋಲ್ ಬಂಕ್ ಮಾಲೀಕ ರೊಬ್ಬರಿಗೆ ಕ್ರಷರ್ ಉದ್ಯಮಿ ಯೋರ್ವರ ಪುತ್ರನ ಹೆಸರಲ್ಲಿ ಕರೆ ಮಾಡಿದ ಆಗಂತುಕ ‘ಅಣ್ಣಾ ನಾನು ಇಂತಹವರ ಮಗ. ಅಪ್ಪನಿಗೆ ಹೇಳಬೇಡಿ. ಅರ್ಜೆಂಟಾಗಿ ೬೫ ಸಾವಿರ ಹಣ ಕೊಟ್ಟು ಕಳಿಸಿ. ನಿಮ್ಮ ಬಳಿ ಒಬ್ಬ ಹುಡುಗನ ಕಳಿಸ್ತಾ ಇದ್ದೇನೆ’ ಅಂತಾ ಹೇಳಿ ೬೫ ಸಾವಿರ ಪಡೆದು ವಂಚಿಸಲಾಗಿದೆ. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಗೆಯೇ ಮಂಗಳವಾರ ಮಧ್ಯಾಹ್ನ ನಂಜರಾಯಪಟ್ಟಣದ ಹಣಕಾಸು ಸಂಸ್ಥೆಯ ಕ್ಯಾಷಿಯರ್ ಒಬ್ಬರಿಗೆ ಕರೆ ಮಾಡಿದ ಇದೇ ಆಗಂತುಕ ‘ಸರ್ ನಾನು ದುಬಾರೆಯ ಇಂತಹವರ ಮಗ ಮಾತಾಡ್ತೇನೆ. ಪ್ಲೀಸ್ ಅಪ್ಪನಿಗೆ ಹೇಳಬೇಡಿ. ಅರ್ಜೆಂಟ್ ಆಗಿ ೨೫ ಸಾವಿರ ಕೊಟ್ಟು ಕಳಿಸಿ. ಒಬ್ಬ ಆಟೋ ಚಾಲಕನನ್ನು ಕಳಿಸ್ತಾ ಇದ್ದೇನೆ’ ಅಂತಾ ಹೇಳಿದಾಗ, ಆ ಉದ್ಯಮಿಯ ಮೇಲಿನ ಅಭಿಮಾನಕ್ಕೆ ಬೆರಗಾದ ಕ್ಯಾಷಿಯರ್ ತನ್ನ ಜೇಬಿನಲ್ಲಿದ್ದ ೨೨ ಸಾವಿರ ರೂಪಾಯಿ ಹಣವನ್ನು ಕೊಟ್ಟು ಕಳುಹಿಸಿ ಯಾಮಾರಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕೂಡ್ಲೂರಿನ ಮತ್ತೊಂದು ಪೆಟ್ರೋಲ್ ಬಂಕ್‌ಗೆ ಮತ್ತೊಬ್ಬ ಪ್ರಭಾವಿ ವ್ಯಕ್ತಿಯ ಹೆಸರು ಹೇಳಿ ೧೦ ಸಾವಿರ ಪಡೆಯಲಾಗಿದೆ.
(ಮೊದಲ ಪುಟದಿಂದ) ಕೂಡಿಗೆಯ ಆಗ್ರೋ ಸೆಂಟರ್‌ನಲ್ಲಿನ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿ ‘ನಾನು ಇಂತಹವರ ಮಗ ಕಣೋ, ಅರ್ಜೆಂಟ್ ೧೨ ಸಾವಿರ ಹಣ ಕೊಟ್ಟು ಕಳಿಸೋ. ಆಟೋದವ ನಿನ್ ಬಳಿ ಬರ್ತಾನೆ’ ಎಂದು ಹೇಳಿ ಅಲ್ಲೂ ಹಣ ಪಡೆದು ವಂಚಿಸಲಾಗಿದೆ.
ಹಣವAತರ ಬಳಿ ಹಣ ಪಡೆದು ತರುವ ಆಟೋ ಚಾಲಕರಿಗೆ ೫೦೦ ರೂಪಾಯಿ ಬಾಡಿಗೆ ನೀಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಆಟೋ ಚಾಲಕನೋರ್ವನಿಗೆ ಕರೆ ಮಾಡಿ, ‘ಸ್ವಲ್ಪ ಸಮಯ ಕಾಯಿ. ಒಬ್ಬ ಪಾರ್ಟಿ ಹತ್ರ ಹೋಗು ೩ ಲಕ್ಷ ಕೊಡ್ತಾರೆ ಕೇಳಿಕೊಂಡು ಬಾ. (ಮೊದಲ ಪುಟದಿಂದ) ಕೂಡಿಗೆಯ ಆಗ್ರೋ ಸೆಂಟರ್‌ನಲ್ಲಿನ ಸಿಬ್ಬಂದಿಯೊಬ್ಬರಿಗೆ ಕರೆ ಮಾಡಿ ‘ನಾನು ಇಂತಹವರ ಮಗ ಕಣೋ, ಅರ್ಜೆಂಟ್ ೧೨ ಸಾವಿರ ಹಣ ಕೊಟ್ಟು ಕಳಿಸೋ. ಆಟೋದವ ನಿನ್ ಬಳಿ ಬರ್ತಾನೆ’ ಎಂದು ಹೇಳಿ ಅಲ್ಲೂ ಹಣ ಪಡೆದು ವಂಚಿಸಲಾಗಿದೆ.
ಹಣವAತರ ಬಳಿ ಹಣ ಪಡೆದು ತರುವ ಆಟೋ ಚಾಲಕರಿಗೆ ೫೦೦ ರೂಪಾಯಿ ಬಾಡಿಗೆ ನೀಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಆಟೋ ಚಾಲಕನೋರ್ವನಿಗೆ ಕರೆ ಮಾಡಿ, ‘ಸ್ವಲ್ಪ ಸಮಯ ಕಾಯಿ. ಒಬ್ಬ ಪಾರ್ಟಿ ಹತ್ರ ಹೋಗು ೩ ಲಕ್ಷ ಕೊಡ್ತಾರೆ ಕೇಳಿಕೊಂಡು ಬಾ. ಕೆಲವರು ಕುಶಾಲನಗರದಲ್ಲಿ ಪೋಲೀಸರ ಬಳಿ ಬಂದು ಲಬ ಲಬೋ ಅಂತಾ ಬಾಯಿ ಬಡಿದುಕೊಳ್ತಾ ‘ನನ್ನ ಹಣ ವಸೂಲಿ ಮಾಡಿಕೊಡಿ’ ಅಂತಾ ಭಜರಂಗದಳದ ಜಿಲ್ಲಾ ಸಂಚಾಲಕ ಅನೀಶ್ ಕುಮಾರ್ ಸಂಗಡ ಬಂದು ದೂರು ನೀಡಿದ್ದಾರೆ. ಸಾರ್ವಜನಿಕರು ಸೈಬರ್ ಆಗಂತುಕರಿAದ ಎಚ್ಚರಿಕೆಯಿಂದ ಇರಬೇಕು.
ಯಾವುದೇ ಸಂದರ್ಭ ಯಾವುದೇ ವ್ಯಕ್ತಿಗಳು ಯಾವುದೇ ಪ್ರಭಾವಿಗಳ ಹೆಸರು ಹೇಳಿ ಕರೆ ಮಾಡಿ ಹಣ ಕೇಳಿದಲ್ಲಿ ಕೂಡಲೇ ಜಾಗೃತರಾಗಿ ಸಂಬAಧಪಟ್ಟ ವ್ಯಕ್ತಿಗಳಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬೇಕಿದೆ ಎಂಬುದು ಸಾಮಾಜಿಕ ಕಳಕಳಿ.