ಗೋಣಿಕೊಪ್ಪಲು, ನ. ೧೦: ಕೊಡವರ ಕೋವಿ ಹಕ್ಕಿಗಾಗಿ ಶ್ರಮಿಸಿದ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಪೊನ್ನಣ್ಣ ಅವರನ್ನು ಹಳ್ಳಿಗಟ್ಟು ಗ್ರಾಮದ ಭದ್ರಕಾಳಿ ದೇವಾಲಯ ಸಮಿತಿಯು ಸನ್ಮಾನಿಸಿ ಗೌರವಿಸಿದೆ. ದೇವಸ್ಥಾನ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಆಡಳಿತ ಮಂಡಳಿಯ ಪ್ರಮುಖರ ಸಭೆಯಲ್ಲಿ ಗ್ರಾಮದ ಹಿರಿಯರಾದ ಮೂಕಳೇರ ಎಸ್. ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ವೇಳೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಮೂಕಳೇರ ರಮೇಶ್, ತಾ.ಪಂ. ಮಾಜಿ ಸದಸ್ಯರಾದ ಶಾಜಿ ಅಚ್ಚುತ್ತನ್, ಪ್ರಮುಖರಾದ ಮಿದೇರಿರ ನವೀನ್, ಮತ್ರಂಡ ದಿಲ್ಲು, ಮುಕ್ಕಾಟೀರ ಸಂದೀಪ್, ಕರ್ತಮಾಡ ರಮ್ಯ, ಎರ್ಮುಹಾಜಿ, ಚೆರಿಯಪಂಡ ಸನ್ನಿ, ಯಶ್ವಿನ್, ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯರಾದ ಚಮ್ಮಟ್ಟೀರ ಪ್ರವೀಣ್ ಸ್ವಾಗತಿಸಿ, ಧನು ಅಪ್ಪಣ್ಣ ವಂದಿಸಿದರು. ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಪೊನ್ನಣ್ಣ ನವರು ಇದೇ ಸಂದರ್ಭ ರೂ. ೫೦ ಸಾವಿರ ದೇಣಿಗೆಯನ್ನು ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಿದರು.