ಮಡಿಕೇರಿ, ನ. ೧೦: ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಅವರಿಗೆ ‘ಬೆಸ್ಟ್ ಇಂಗ್ಲೀಷ್ ಟೀಚರ್ ಅವಾರ್ಡ್ ದೊರೆತಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ತಾ. ೬ ರಂದು ಕರ್ನಾಟಕ ಎಕ್ಸಲೆನ್ಸ್ ಅವಾರ್ಡ್ಸ್ ಸಂಘಟನೆ ನಡೆಸಿದ ಸಮಾರಂಭದಲ್ಲಿ ಪೂವಮ್ಮ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

ಡಾ. ಪೂವಮ್ಮ ರೋಟರಿ ಗೋಣಿಕೊಪ್ಪದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದು, ರಾಜ್ಯದ ಹಾಗೂ ಹೊರ ರಾಜ್ಯಗಳ ಹಲವೆಡೆ ಇಂಗ್ಲೀಷ್ ಪ್ರಬಂಧಗಳನ್ನು ಮಂಡಿಸಿ, ಉತ್ತಮ ಭಾಷಣ ಕಲೆಗೂ ಹೆಸರಾಗಿದ್ದಾರೆ.