ಶನಿವಾರಸಂತೆ, ನ. ೯: ತೊರೆದು ಹೋದ ಪತ್ನಿಯ ಚಿಂತೆಯಿAದ ಮದ್ಯ ವ್ಯಸನಿಯಾಗಿದ್ದ ಕೂಲಿಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ನೀರುಗುಂದ ಗ್ರಾಮದಲ್ಲಿ ನಡೆದಿದೆ.

ಗುರುಮೂರ್ತಿ (೪೦) ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ ಈತನ ಪತ್ನಿ ಶಶಿಕಲಾ ಒಂದೂವರೆ ವರ್ಷದ ಹಿಂದೆ ಪತಿ ಹಾಗೂ ಮಗ ಎಂ.ಜಿ. ಸಾಗರನನ್ನು ಬಿಟ್ಟು ಹೋಗಿದ್ದು, ಈವರೆಗೂ ಮನೆಗೆ ಹಿಂದಿರುಗಲಿಲ್ಲ ಎನ್ನಲಾಗಿದೆ. ಪತ್ನಿಯ ಅಗಲಿಕೆಯ ಚಿಂತೆಯಿAದ ಮದ್ಯ ವ್ಯಸನಿಯಾದ ಗುರುಮೂರ್ತಿ ಕಳೆದ ೩ ತಿಂಗಳಿನಿAದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ೩ ದಿನದ ಹಿಂದೆ ಮನೆಗೆ ಬಂದಿದ್ದವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ಪತ್ನಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಸಾಗರ್ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.