ಮಡಿಕೇರಿ, ನ. ೧೦: ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾ. ೧೪ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ಉಚಿತ ಕಣ್ಣು ತಪಾಸಣೆ ಶಿಬಿರ ನಡೆಯಲಿದೆ. ನೇತ್ರ ತಜ್ಞ ಡಾ. ಸಿ.ಆರ್. ಪ್ರಶಾಂತ್ ನೇತ್ರ ತಪಾಸಣೆ ನಡೆಸುವರು.
ಶಿಬಿರದಲ್ಲಿ ಅವಶ್ಯವಿದ್ದವರಿಗೆ ಉಚಿತ ಔಷಧಿ ನೀಡಲಾಗುವುದು ಹಾಗೂ ಉಚಿತ ಕನ್ನಡಕವನ್ನು ನೀಡುವ ದಿನಾಂಕವನ್ನು ತಿಳಿಸಲಾಗುವುದು. ಕಾರ್ಯಕ್ರಮವನ್ನು ಕೊಡಗು ಗೌಡ ನಿವೃತ್ತ ನೌಕರರ ಸಂಘ, ರೋಟರಿ ಮಿಸ್ಟಿ ಹಿಲ್ಸ್, ವಿನೋದ್ ಮೆಡಿಕಲ್ಸ್ ಮಡಿಕೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರುಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳುವವರು ಕೋವಿಡ್ ಲಸಿಕೆಯನ್ನು ಪಡೆದಿರಬೇಕು ಮತ್ತು ಎಲ್ಲಾ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಬೇಕೆಂದು ತಿಳಿಸಲಾಗಿದೆ.