ಶನಿವಾರಸAತೆ, ನ. ೭: ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ನಿಸರ್ಗ ಸಿರಿ ಇಕೋ ಕ್ಲಬ್ ವತಿಯಿಂದ ಹಸಿರು ದೀಪಾವಳಿ ಅಂಗವಾಗಿ ಪುಷ್ಪ ರಂಗೋಲಿ ಬಿಡಿಸಿ ಆಚರಿಸಲಾಯಿತು. ಪ್ರಾಂಶುಪಾಲ ಶಿವಪ್ರಕಾಶ್, ಶಿಕ್ಷಕಿಯರಾದ ಸವಿತಾ, ಶ್ರಿಕಲಾ ಇತರರು ಇದ್ದರು. ಸಮೀಪದ ಹಂಡ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಶಿಕ್ಷಕ ವಿಕ್ರಾಂತ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪುಷ್ಪ ರಂಗೋಲಿ ಬಿಡಿಸಿದರು.