ವೀರಾಜಪೇಟೆ, ನ. ೭: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ೨ನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಕ್ರೀಡಾಕೂಟದಲ್ಲಿ ೪ ವಿಭಾಗಗಳನ್ನು ಮಾಡಲಾಗಿತ್ತು. ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಚೆನ್ನಂಗಿ ಗ್ರಾಮದ ಕೀರ್ತನ್ ಎರಡನೇ ಬಾರಿಗೆ ಪ್ರಶಸ್ತಿ ಪಡೆದರು. ದ್ವಿತೀಯ ಸ್ಥಾನವನ್ನು ಕೋಟೆಕೊಪ್ಪ ಗ್ರಾಮದ ಆದರ್ಶ್ ಪಡೆದುಕೊಂಡರು.

ಮಹಿಳೆಯರ ಸಿಂಗಲ್ಸ್ನಲ್ಲಿ ಕಣ್ಣಂಗಾಲದ ಅಂಜಲಿ ಕಲ್ಪೇಶ್ ಸತತವಾಗಿ ಎರಡನೇ ಬಾರಿಗೆ ಪ್ರಥಮ ಸ್ಥಾನ ಪಡೆದರೆ ಕೈಕೇರಿ ಗ್ರಾಮದ ಸಹನಾ ತಿಮ್ಮಯ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.

ಪುರುಷರ ಡಬಲ್ಸ್ನಲ್ಲಿ ಕಳೆದ ಬಾರಿಯ ಚಾಂಪಿಯನ್ಸ್ಗಳನ್ನು ಮಧು ಮತ್ತು ಗೋಪಿ ಮೊದಲ ಪಂದ್ಯದಲ್ಲೆ ಸೋಲಿಸಿದರು.

ಫೈನಲ್ ಪಂದ್ಯದಲ್ಲಿ ಕಣ್ಣಂಗಾಲ ಗ್ರಾಮದ ನವೀನ್ ಮತ್ತು ರಾಕೇಶ್ ಅದ್ಭುತ ಗೆಲುವಿನ ಮೂಲಕ ಪ್ರಥಮ ಸ್ಥಾನ ಪಡೆದರೆ, ಯುವ ಪ್ರತಿಭೆಗಳಾದ ಚೆನ್ನಂಗಿಯ ದಿತಿನ್ ಮತ್ತು ಕೀರ್ತನ್ ಸಹೋದರರು ದ್ವಿತೀಯ ಸ್ಥಾನ ಪಡೆದರು.

ಕ್ರೀಡಾಕೂಟದ ಕೇಂದ್ರ ಬಿಂದು ೪೫+ ಆಟಗಾರರು ಚೆನ್ನಂಗಿ ಗ್ರಾಮದ ವೇಣು ಕುಮಾರ್ ಪ್ರಥಮ ಮತ್ತು ಡಾಲು ದ್ವಿತೀಯ ಸ್ಥಾನ ಸೋಲಿಸಿದರು.

ಫೈನಲ್ ಪಂದ್ಯದಲ್ಲಿ ಕಣ್ಣಂಗಾಲ ಗ್ರಾಮದ ನವೀನ್ ಮತ್ತು ರಾಕೇಶ್ ಅದ್ಭುತ ಗೆಲುವಿನ ಮೂಲಕ ಪ್ರಥಮ ಸ್ಥಾನ ಪಡೆದರೆ, ಯುವ ಪ್ರತಿಭೆಗಳಾದ ಚೆನ್ನಂಗಿಯ ದಿತಿನ್ ಮತ್ತು ಕೀರ್ತನ್ ಸಹೋದರರು ದ್ವಿತೀಯ ಸ್ಥಾನ ಪಡೆದರು.

ಕ್ರೀಡಾಕೂಟದ ಕೇಂದ್ರ ಬಿಂದು ೪೫+ ಆಟಗಾರರು ಚೆನ್ನಂಗಿ ಗ್ರಾಮದ ವೇಣು ಕುಮಾರ್ ಪ್ರಥಮ ಮತ್ತು ಡಾಲು ದ್ವಿತೀಯ ಸ್ಥಾನ ಸತೀಶ್, ಕಣ್ಣಂಗಾಲ ಜೀವನ್, ಚೆನ್ನಂಗಿ ದೇವರಾಜ್, ಪ್ರಕಾಶ್, ಕೋಟೆಕೊಪ್ಪ ಸುರೇಶ್, ರವೀಂದ್ರ, ಕೈಕೇರಿ ಪ್ರಾಣೇಶ್, ಟ್ರೋಫಿ ದಾನಿಗಳಾದ ಅಜಿತ್, ನಿತಿನ್, ಗಣೇಶ್, ಪ್ರಶಾಂತ್, ನರ್ತನ್, ಕಿಲನ್ ಮತ್ತು ವೇದಿಕೆಯ ನಿರ್ದೇಶಕರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಡಾಲು ಸ್ವಾಗತಿಸಿದರೆ, ಕಾರ್ಯದರ್ಶಿ ಮಂಜುನಾಥ್ ವಂದಿಸಿದರು. ಖಜಾಂಚಿ ಪವನ್ ಕುಮಾರ್ ನಿರೂಪಿಸಿದರು.