ಸೋಮವಾರಪೇಟೆ, ನ. ೭: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ ನಡೆದ ಜೇಸೀ ಸಪ್ತಾಹದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಸಗೋಡು ಚನ್ನಮ್ಮ ಆಂಗ್ಲ ಶಾಲೆಯ ವಿದ್ಯಾರ್ಥಿ ಗಳು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಪ್ರಾಥಮಿಕ ವಿಭಾಗದ ಬರವಣಿಗೆ ಸ್ಪರ್ಧೆಯಲ್ಲಿ ಡಿ.ಆರ್. ಜಾಹ್ನವಿ ಪ್ರಥಮ, ಮ್ಯಾರ ಥಾನ್ ಸ್ಪರ್ಧೆಯಲ್ಲಿ ಟಿ.ವೈ. ಕಲ್ಪನ ಪ್ರಥಮ, ಬಾಲಕರ ವಿಭಾಗದಲ್ಲಿ ನತಿನ್ ದ್ವಿತೀಯ, ಚಿತ್ರಕಲಾ ವಿಭಾಗದಲ್ಲಿ ಬಿ.ಪಿ. ಸ್ಪಂದನ ಪ್ರಥಮ, ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ನಾಫಿದಾ ತೃತೀಯ, ಮ್ಯಾರಥಾನ್ನಲ್ಲಿ ಟಿ.ವೈ. ಚೈತನ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದರೊಂದಿಗೆ ಪ್ರೌಢಶಾಲಾ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನವನ್ನು ಪಡೆದಿದ್ದು, ಬಹುಮಾನಕ್ಕೆ ಭಾಜನವಾಗಿದೆ.