*ಗೋಣಿಕೊಪ್ಪ, ನ. ೮: ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಗೋಣಿಕೊಪ್ಪದ ರಿಫ್ಲೆಕ್ಷನ್ಸ್ ಡ್ಯಾನ್ಸ್ ತಂಡ ಟ್ರಿಯೋ ಡ್ಯಾನ್ಸ್ನಲ್ಲಿ ಪ್ರಥಮ ಹಾಗೂ ಮಿನಿ ಗ್ರೂಪ್ ಡ್ಯಾನ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ನೃತ್ಯ ಮತ್ತು ಕ್ರೀಡಾ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಂಸ್ಥೆಯ ಗೋಣಿಕೊಪ್ಪದ ರಿಫ್ಲೆಕ್ಷನ್ಸ್ ಡ್ಯಾನ್ಸ್ ತಂಡವು ಮೇಘಾ ಗ್ರೂಪ್ ೨ನೇ ಸ್ಥಾನ, ಮಿನಿ ಗ್ರೂಪ್ ೨ನೇ ಸ್ಥಾನ, ಟ್ರಿಯೊ ಡ್ಯಾನ್ಸ್ ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿತು. ನೃತ್ಯ ತರಬೇತುದಾರ ಅವಿನಾಶ್ ನೇತೃತ್ವದಲ್ಲಿ ರಿಶಾ ನಾಣಯ್ಯ, ಸಿಂಚನ, ಲಕ್ಷ್ಮೀಪ್ರಿಯಾ, ತನ್ವಿ, ಲಲಿತಾ, ಥಾನ್ಯಾ, ಕುಶಿ, ಗ್ರಂಥ, ರಿಕಿತ್, ಪ್ರೀತಂ, ದಿವ್ಯ, ದಿಯಾ, ಶ್ರೇಯಾ, ಹರ್ಷಿಕಾ, ಪೊನ್ನದೇವಿ, ದಿಶಾ, ಕೀರ್ತನಾ, ವಿತ, ವಿಪುಲ್, ಚೇತನ್ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸ್ಪರ್ಧೆಯಲ್ಲಿ ಆಯ್ಕೆಯಾದವರು ದೆಹಲಿಯಲ್ಲಿ ನಡೆಯುವ ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.