ಮಡಿಕೇರಿ, ನ. ೮: ನೇಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿ ಯೇಷÀನ್ (ನಿಮಾ)ದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಡಿಕೇರಿಯ ಡಾ. ಎ.ಆರ್. ರಾಜಾರಾಮ್, ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಡಾ. ಶಾಮಪ್ರಸಾದ್ ಮತ್ತು ಕೋಶಾಧಿಕಾರಿಯಾಗಿ ಬೆಟ್ಟಗೇರಿಯ ಡಾ. ಪದ್ಮನಾಭ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾ. ೭ ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ತಾಲೂಕು ಪ್ರತಿನಿಧಿಗಳಾಗಿ ಡಾ. ಸುಬ್ರಮಣ್ಯ ರಾವ್ (ಬೆಕ್ಕಸೊಡ್ಲೂರು) (ಪೊನ್ನಂಪೇಟೆ), ಡಾ. ರಾಜಾರಾಮ ಶೆಟ್ಟಿ (ಕುಶಾಲನಗರ), ಡಾ. ಮಹೇಶ್, ಚೆಟ್ಟಳ್ಳಿ (ಸೋಮವಾರಪೇಟ್), ಡಾ. ಪುರುಷೋತ್ತಮ್ ಮಾದಾಪುರ (ಮಡಿಕೇರಿ) ಹಾಗೂ ಡಾ. ರೋಷನ್ ಸಿದ್ದಾಪುರ (ವೀರಾಜಪೇಟೆ), ಉಪಾಧ್ಯಕ್ಷರಾಗಿ ಡಾ. ಉದಯ ಕುಮಾರ್ ನೆಲ್ಲಿಹುದಿಕೇರಿ, ಡಾ. ವಿವೇಕ್‌ರಾವ್ ಮತ್ತು ಡಾ.ಅರುಣ ಕುಲಕರ್ಣಿ, ಸಹಕಾರ್ಯದರ್ಶಿಗಳಾಗಿ ಡಾ. ಮುರಳಿ ಭಾಗಮಂಡಲ ಮತ್ತು ಡಾ. ಸುದೇಶ್ ಹೆಗ್ಡೆ ಕಾರ್ಯ ನಿರ್ವಹಿಸಲಿರುವರು.

ನಿರಂತರ ವೈದ್ಯ ಶಿಕ್ಷಣದ ಸಂಯೋಜಕರಾಗಿ ಡಾ. ಲಕ್ಷಿö್ಮÃಶ ಪೆರಾಜೆ ಮತ್ತು ಡಾ. ಈಶ್ವರಿ ನಿಯುಕ್ತಿಗೊಂಡರು. ಪೋಷಕರಾಗಿ ಡಾ. ಪ್ರಕಾಶ್ ಕುಲಕರ್ಣಿ, ಡಾ. ಸಿ.ಆರ್. ಉದಯಕುಮಾರ್, ಡಾ. ಬಿವಿ. ಶೆಣೈ, ಡಾ. ಸುದೇಶ್ ಹೆಗ್ಡೆ, ಡಾ. ರಾಜೇಂದ್ರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಡಾ. ಉದಯ ಶಂಕರ್ ಅವುಗಳನ್ನು ಆಯ್ಕೆ ಮಾಡಲಾಯಿತು.

ಮೈಸೂರಿನ ಶ್ರೀರಂಗ ಚಿಕಿತ್ಸಾ ಕೇಂದ್ರದ ಡಾ. ಪ್ರಸನ್ನ ವೆಂಕಟೇಶ್ ದಿಕ್ಸೂಚಿ ಭಾಷಣಮಾಡಿ ಹೊಸ ತಂಡವು ಆಯುರ್ವೇದದ ಜೊತೆಗೆ ಇತರ ಜ್ಞಾನ ಶಾಖೆಗಳಾದ ವೃಕ್ಷಾ ಯುರ್ವೇದ, ಪಶು ಆಯುರ್ವೇದ, ವಾಸ್ತು, ಜ್ಯೋತಿಷ್ಯ, ಯೋಗ ಮೊದಲಾದವುಗಳ ನೆರವಿನೊಂದಿಗೆ ಸಮಗ್ರ ಚಿಕಿತ್ಸೆ ನೀಡುವ ಅಗತ್ಯವನ್ನು ಮನಗಾಣಿಸಿದರು.

ನಿರಂತರ ವೈದ್ಯ ಶಿಕ್ಷಣದ ಅಂಗವಾಗಿ ಮಂಗಳೂರಿನ ಕರಾವಳಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ದಯಾನಂದರು ಕ್ಯಾನ್ಸರ್ ಚಿಕಿತ್ಸೆಯಲ್ಲಿನ ತಮ್ಮ ಸಫಲ ಅನುಭವಗಳನ್ನು ವಿವರಿಸಿ ಇಂದಿನ ಕಾಲದಲ್ಲಿ ಕಿಮೋಥೆರಪಿ ಮತ್ತು ರೇಡಿಯೇಷನ್‌ಗಳ ದುಷ್ಪರಿಣಾಮ ಗಳನ್ನು ತಡೆಯುವುದು ಕೂಡ ನಮ್ಮ ಜವಾಬ್ದಾರಿಯಾಗಬೇಕಾಗಿದೆ ಎಂದರು.

ಮಧುಮೇಹ ಚಿಕಿತ್ಸೆಯಲ್ಲಿ ಆಯುರ್ವೇದದ ಕೊಡುಗೆಗಳ ಕುರಿತು ಡಾ. ಉದಯ ಶಂಕರ್ ಉಪನ್ಯಾಸ ನೀಡಿದರು. ಮೊದಲಿಗೆ ಗ್ರೀನ್ ಮಿಲ್ಕ್ ಕಾನ್ಸೆಪ್ಟ್ನ ಶ್ರೀವಲ್ಲಭ ಸ್ವಾಗತಿಸಿದರು.

ಜಿಲ್ಲೆಯಲ್ಲಿ ಮಹಿಳಾ ವೈದ್ಯರ ಸಂಘಟನೆಯೊAದು ಮೊಟ್ಟಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿದ್ದು, ನಿಮಾ ಮಹಿಳಾ ವಿಭಾಗದ ಅಧ್ಯಕ್ಷರಾಗಿ ನಾಪೋಕ್ಲಿನ ಡಾ. ಶೈಲಜಾ ರಾಜೇಂದ್ರ ಮತ್ತು ಕಾರ್ಯದರ್ಶಿಯಾಗಿ ಸೌಮ್ಯ ಗಣರಾಜ್ ಅಧಿಕಾರ ಸ್ವೀಕರಿಸಿದರು. ಇತರ ಪದಾಧಿಕಾರಿಗಳಾಗಿ ಡಾ. ಈಶ್ವರಿ ಮತ್ತು ಡಾ. ಸಾವಿತ್ರಿ ರಾಜಗೋಪಾಲ್ (ಉಪಾಧ್ಯಕ್ಷರು), ಡಾ. ಶುಭಾ ಮತ್ತು ಡಾ. ಅಮೂಲ್ಯ (ಸಹಕಾರ್ಯ ದರ್ಶಿಗಳು), ಡಾ. ಹೀನಾಕ ಉಸರ್ (ಕೋಶಾಧಿಕಾರಿ) ಡಾ. ರೇಷ್ಮಾ ಮುರಳಿ ಮತ್ತು ಡಾ. ಜ್ಯೋತಿ ರಾಜಾರಾಮ್ (ಸಂಘಟನಾ ಕಾರ್ಯದರ್ಶಿಗಳು), ಡಾ. ಶೈಲಜಾ ಮುರಳೀಧರ್, ಡಾ. ಅರುಣಾ, ಡಾ. ಮಮತಾ ಶೆಟ್ಟಿ ಮತ್ತು ಡಾ. ಲತಾ ಸುಧೀರ್ (ಕಾರ್ಯಕಾರಿ ಸಮಿತಿ ಸದಸ್ಯರು) ಅವಿರೋಧವಾಗಿ ಆಯ್ಕೆಯಾದರು.