(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ನ. ೮: ಪ್ರಸ್ತುತದ ಆಧುನಿಕ ಪ್ರಪಂಚದಲ್ಲಿ ಯುವ ಜನಾಂಗದ ಬೇಕು-ಬೇಡಿಕೆಗಳು, ಅವರ ಆಶೋತ್ತರಗಳೇ ವಿಭಿನ್ನ ರೀತಿಯದ್ದು, ದುಬಾರಿ ಬೆಲೆಯ ಕಾರುಬೇಕು, ಬೈಕ್ ಬೇಕು, ಶೋಕಿಯ ಜೀವನ ನಡೆಸಬೇಕು ಎಂಬಿತ್ಯಾದಿ ಪ್ರಯತ್ನಗಳು ಕಂಡು ಬರುತ್ತಿರುವುದು ಸಹಜ ವಾಗಿದೆ.

ಇಂತಹ ಆಧುನಿಕತೆಯ ನಾಗಾಲೋಟದ ನಡುವೆ ಹಲವಾರು ದುರಂತಗಳು ಕೂಡ ಸಂಭವಿಸುತ್ತಿರುವುದು ಶ್ರೀಮಂತರ ಬದುಕಿನಲ್ಲಿ ದೊಡ್ಡ ದೊಡ್ಡ ಆಘಾತಗಳನ್ನೇ ಉಂಟು ಮಾಡುತ್ತಿರುವಂತಹ ಪ್ರಸಂಗಗಳು ಸಾಕಷ್ಟಿವೆ.

ಮಹಾನಗರಿಗಳಲ್ಲೇ ಶೋಕಿಯ ಜೀವನ ನಡೆಸಲು ಬಯಸುವ ಯುವಕರು ಕ್ಲಬ್... ಪಬ್... ಬಾರ್‌ಗಳು... ನೈಟ್‌ಪಾರ್ಟಿಗಳು... ರೇವು ಪಾರ್ಟಿಗಳಲ್ಲಿ ಕಾಣಿಸಿ ಕೊಳ್ಳುವುದು ದುಶ್ಚಟಗಳಿಗೆ ಬಲಿಯಾಗುತ್ತಿರುವದು ಒಂದೆಡೆ ಯಾದರೆ, ಇವರ ಆಶೋತ್ತರಗಳನ್ನು ಈಡೇರಿಸಲು ಪೋಷಕರೂ ಅನಿವಾರ್ಯವೆಂಬAತೆ ಒಗ್ಗಿಕೊಳ್ಳುತ್ತಿ ರುವುದು ಈಗಿನ ದಿನಗಳಲ್ಲಿ ಕಂಡು ಬರುತ್ತಿವೆ. ಆದರೆ ಇಲ್ಲೊಬ್ಬ ಹಿರಿಯರು ತಮ್ಮ ಮಕ್ಕಳೂ ಸೇರಿದಂತೆ ಇತರ ಯುವಕರೂ ಗ್ರಾಮೀಣ ಪ್ರದೇಶದಲ್ಲಿ ತೋಟ-ಕೃಷಿ ಕೆಲಸಗಳಲ್ಲಿ ತೊಡಗಿಸಿ ಕೊಂಡು, ಇಲ್ಲಿಯೇ ಆರೋಗ್ಯಕರ ವಾದ ಬದುಕು ಸಾಗಿಸಲು ಎಂಬAತೆ ಪ್ರೇರಣೆ ನೀಡಿ ವಿಶೇಷತೆ ತೋರಿದ್ದಾರೆ. ಇವರ ಈ ಚಿಂತನೆಗೆ ಯುವಕರೂ ಕೈಜೋಡಿಸಿ ನಡೆದುಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಹೈಸೊಡ್ಲುರುವಿನಲ್ಲಿ ಸುಸಜ್ಜಿತ ಶಟಲ್ ಕ್ರೀಡಾಂಗಣ

ದಕ್ಷಿಣ ಕೊಡಗಿನ ಹೈಸೊಡ್ಲೂರು ಗ್ರಾಮದಲ್ಲಿನ ಕಾಫಿ ಬೆಳೆಗಾರರಾದ ಕೇಚಮಾಡ ಟಿ. ನಾಣಯ್ಯ (ಅಪ್ಪುಣು) ಹಾಗೂ ರೋಹಿಣಿ ದಂಪತಿ. ತಮ್ಮ ಕಾಫಿ ತೋಟದ ನಡುವೆ ತಮ್ಮ ಪುತ್ರ ಸಜನ್ ಪೊನ್ನಪ್ಪ ಹಾಗೂ ಆತನ ಸ್ನೇಹಿತರಿಗಾಗಿ ಸುಸಜ್ಜಿತವಾದ ಒಳಾಂಗಣ ಶಟಲ್ ಬ್ಯಾಡ್‌ಮಿಂಟನ್ ಕೋರ್ಟ್ ವೊಂದನ್ನು ‘ಹೈಟೆಕ್’ ಮಾದರಿಯಲ್ಲೇ ನಿರ್ಮಿಸಿಕೊಟ್ಟಿದ್ದಾರೆ. ದಿನವಿಡೀ ತೋಟಗದ್ದೆಗಳಲ್ಲಿ ಕೆಲಸ ನಿರ್ವಹಿಸುವ ಯುವಕರು ಸಂಜೆ ವೇಳೆ ಇತರ ಕ್ಲಬ್-ಬಾರ್‌ಗಳೆಂದು ತಿರುಗಾಡದೆ, ಆಟದಲ್ಲಿ ತೊಡಗಿಸಿ ಕೊಳ್ಳುವದರೊಂದಿಗೆ ಉತ್ತಮ ಬದುಕು ಸಾಗಿಸಲಿ ಎಂಬ ಚಿಂತನೆ ಇವರದ್ದು, ಇದಕ್ಕಾಗಿ ಎರಡು ವರ್ಷದ ಹಿಂದೆ ಕೆಲವಾರು ಕಾಫಿ ಗಿಡಗಳನ್ನು ಕಡಿದು ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಇದುವರೆಗೆ ಇದಕ್ಕೆ ಇವರಿಗೆ ಸುಮಾರು ರೂ. ೧೦.೫೦ ಲಕ್ಷದಷ್ಟು ಹಣ ಖರ್ಚಾಗಿದೆ. ತಮ್ಮ ಪುತ್ರ ಸಜನ್ ಹಾಗೂ ಸ್ನೇಹಿತರು ಕೆರೆ ಏರಿಯೊಂದರಲ್ಲಿ ನೆಟ್ ಅಳವಡಿಸಿ ಕೊಂಡು ಸಂಜೆ ವೇಳೆ ಶಟಲ್ ಆಡುತ್ತಿದ್ದರು. ಆದರೆ ಮಳೆ-ಗಾಳಿ ಬಂದಾಗ ಇದು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ನಾಣಯ್ಯ ಅವರು ಒಳಾಂಗಣ ಕ್ರೀಡಾಂಗಣ ಕಲ್ಪಿಸಿಕೊಡುವ ಪ್ರಯತ್ನ ನಡೆಸಿದ್ದಾರೆ. ನಾಲ್ಕೆöÊದು ಯುವಕರು ಸೇರಿಕೊಂಡು ಆಡುತ್ತಿದ್ದವರು ಇದೀಗ ೨೫ಕ್ಕೂ ಅಧಿಕ ಸಂಖ್ಯೆಗೆ ತಲುಪಿದ್ದಾರೆ.

‘‘ಬ್ಯಾಡ್‌ಮಿಂಟನ್ ೬ ಣo ೯’’ ಎಂದು ಇದಕ್ಕೆ ಹೆಸರಿಸಲಾಗಿದೆ. ತಂದೆಯ ಚಿಂತನೆಯನ್ನು ಪುತ್ರ ಸಜನ್ ಮುಂದುವರಿಸಿದ್ದಾರೆ. ತೋಟ ಕೆಲಸ ಗಳ ಬಳಿಕ ಸಂಜೆ ೬ ರಿಂದ ಈ ಯುವಕರು ಇಲ್ಲಿ ತೊಡಗಿಸಿ ಕೊಳ್ಳುತ್ತಾರೆ.

ಒಳಾಂಗಣ ಕ್ರೀಡಾಂಗಣಕ್ಕೆ ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್, ಸೋಲಾರ್, ಯುಪಿಎಸ್ ಸೇರಿದಂತೆ ಸುಮಾರು ೫೦ ರಿಂದ ೬೦ ಮಂದಿ ಕುಳಿತು ಆಟ ನೋಡುವ ಅವಕಾಶ ಕಲ್ಪಿಸಲಾಗಿದೆ. ‘‘ಬ್ಯಾಡ್‌ಮಿಂಟನ್ ೬ ಣo ೯’’ ಅಂಜಿಕೇರಿನಾಡ್ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿನ ಮೂರು-ನಾಲ್ಕು ಕಿ.ಮೀ. ವ್ಯಾಪ್ತಿಯ ಯುವಕರು ದಿನಂಪ್ರತಿ ಆಟದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಇವರಿಂದ ಕ್ರೀಡಾಂಗಣದ ನಿರ್ವಹಣೆಗೆಂದು ಕನಿಷ್ಟ ಶುಲ್ಕವನ್ನು ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಆಟದ ನಡುವೆ ಯುವಕರೇ ಕಾಫಿ-ಟೀ... ಬಿಸಿ ನೀರು ಮಾಡಿಕೊಳ್ಳಲೂ ವ್ಯವಸ್ಥೆ ಮಾಡಿಕೊಡಲಾಗಿದೆ.

ಇದೀಗ ಆಗಾಗ್ಗೆ ಕೆಲವು ‘ಟೂರ್ನಮೆಂಟ್’ಗಳನ್ನೂ ಇಲ್ಲಿ ನಡೆಸಲಾಗುತ್ತಿದೆ. ಪ್ರಸ್ತುತ ‘ವರ್ಕ್ ಫ್ರಂ ಹೋಂ’ ನಲ್ಲಿರುವ ಯುವಕರೂ ಕ್ರೀಡಾಂಗಣವನ್ನು ಬಳಸಿ ಕೊಳ್ಳುತ್ತಿ ದ್ದಾರೆ. ಗುಣಮಟ್ಟದ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಧೂಮಪಾನ - ಪ್ಲಾಸ್ಟಿಕ್ ನಿಷೇಧಕ್ಕೂ ಒತ್ತು ನೀಡಲಾಗಿದೆ.

ಆಟದಲ್ಲಿ ಭಾಗಿಯಾಗುತ್ತಿರುವ ಯುವಕರು ಇತ್ತೀಚೆಗೆ ಧ್ಯಾನ್‌ಚಂದ್ ಅಂರ‍್ರಾಷ್ಟಿçÃಯ ಕ್ರೀಡಾದಿನವನ್ನೂ ಅವರ ಗೌರವಾರ್ಥ ಹಾಕಿಸ್ಟಿಕ್ ಇಟ್ಟು ಆಚರಿಸಿದ್ದಾರೆ.

ಭಾರತದ ಬ್ಯಾಡ್ ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರ ಫ್ಲೆಕ್ಸ್ ಅನ್ನೂ ಕ್ರೀಡಾಂಗಣ ದೊಳಗೆ ಅಳವಡಿಸಲಾಗಿದೆ. ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ವಾತಾವರಣ ಏರು - ಪೇರಿನಿಂದಾಗಿ ಹಲವಷ್ಟು ತಿಂಗಳು ಗಾಳಿ-ಮಳೆಯಿಂದಾಗಿ ಯಾವದೇ ಕ್ರೀಡಾಚಟುವಟಿಕೆಗಳು ಅಸಾಧ್ಯ. ಆದರೆ ಇಲ್ಲಿ ಯಾವುದೇ ಸನ್ನಿವೇಶ ದಲ್ಲೂ ಪ್ರತಿದಿನ ಸಂಜೆ ಯುವಕರು ಆಟದಲ್ಲಿ ತಲ್ಲೀನರಾಗಲು ಇದು ಅವಕಾಶವಾಗಿದೆ.

ಪ್ರತಿ ಗ್ರಾಮ ಗ್ರಾಮಗಳಲ್ಲೂ ಇಂತಹ ವ್ಯವಸ್ಥೆಗಳಿದ್ದರೆ ಯುವಕರು ಇತರ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯ ಕಾಪಾಡಿಕೊಳ್ಳುವ ದರೊಂದಿಗೆ ಗ್ರಾಮೀಣ ಭಾಗದಲ್ಲೂ ತೋಟಗಳ ನಿರ್ವಹಣೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಬದುಕು ಸಾಗಿಸಲು ಪ್ರೇರಣೆ ನೀಡಿದಂತಾಗಲಿದೆ ಎಂಬದು ಇವರ ಅಭಿಪ್ರಾಯವಾಗಿದೆ.