ಮಡಿಕೇರಿ, ನ. ೭: ಕೊಡವ ಜನಾಂಗಕ್ಕೆ ಸಂಬAಧಿಸಿದ ವಿವಿಧ ಬೇಡಿಕೆಗಳು ಹಾಗೂ ಹಕ್ಕೊತ್ತಾಯವನ್ನು ಮುಂದಿರಿಸಿ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆ ವತಿಯಿಂದ ಇಂದು ಶ್ರೀಮಂಗಲ ನಾಡ್ನ ಕುಮಟೂರಿನಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿನ ಕಲ್ಲಂಬಲ ಮಂದ್ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ವಿವಿಧ ವಿಚಾರಗಳ ಕುರಿತು ಪ್ರಸ್ತಾಪಿಸಿ ಜನ ಬೆಂಬಲಕ್ಕೆ ಮನವಿ ಮಾಡಿದರು. ಈ ಸಂದರ್ಭ ಕಳ್ಳಂಗಡ ಬಾಲಕೃಷ್ಣ, ಮತ್ರಂಡ ಶರತ್ ಮುತ್ತಪ್ಪ, ಕಳ್ಳಂಗಡ ರಜಿತ್ ಪೂವಣ್ಣ, ಕೊಟ್ರಂಗಡ ನರೇಶ್, ಪೆಮ್ಮಣಮಾಡ ರಮೇಶ್, ಮುಕ್ಕಾಟಿರ ಭವ್ಯ, ಬಾಚರಣಿಯಂಡ ಪ್ರಮೀಳಾ, ಬಾಚಂಗಡ ರಜಿತ, ಅಜ್ಜಿಕುಟ್ಟಿರ ಲೋಕೇಶ್ ಮತ್ತಿತರರು ಇದ್ದರು.