ನಾಪೆೆÇÃಕ್ಲು, ನ. ೭ : ಉರಗ ಪ್ರೇಮಿ ಬಿಟ್ಟಂಗಾಲದ ಪೊನ್ನೀರ ಸ್ನೇಕ್ ಗಗನ್‌ಗೆ ೬೧ನೇ ಕಾಳಿಂಗ ಸರ್ಪ ಸೆರೆಯಾಗಿದೆ. ಬೇಟೋಳಿ ಗ್ರಾಮದ ಕೆರೆಯ ಬದಿಯಲ್ಲಿ ಹೊಂಚು ಹಾಕುತ್ತಿದ್ದ ಸುಮಾರು ೧೨ ಅಡಿಗಳಷ್ಟು ಉದ್ದದ ಕಾಳಿಂಗ ಸರ್ಪವನ್ನು ಸ್ನೇಕ್ ಗಗನ್ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ಬಿಟ್ಟಂಗಾಲದ ಪೊನ್ನೀರ ಗಗನ್ ಇದುವರೆಗೆ ೬೧ ಕಾಳಿಂಗ ಸೇರಿದಂತೆ ಸಾವಿರಾರು ಹಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವುಗಳು ಕಂಡು ಬಂದರೆ ಮೊಬೈಲ್ ನಂ. ೮೨೭೭೪೪೫೫೮೯ ಸಂಪರ್ಕಿಸುವAತೆ ಗಗನ್ ತಿಳಿಸಿದ್ದಾರೆ.