(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ನ.೬: ಚೆಸ್ಕಾಂ ಅಧಿಕಾರಿಯೋರ್ವರು ೩೩ ಕೆವಿ ವಿದ್ಯುತ್ ಲೈನ್ ಅನ್ನು ರಾತ್ರೋರಾತ್ರಿ ಬದಲಾಯಿಸಿ ಈ ವಿಷಯವು ಹಿರಿಯ ಅಧಿಕಾರಿಗಳ ಗಮನÀಕ್ಕೆ ಬರುತ್ತಿದ್ದಂತೆಯೇ ಈ ಹಿಂದೆ ಇದ್ದ ರೀತಿಯಲ್ಲಿಯೇ ವಿದ್ಯುತ್ ಕಂಬವನ್ನು ಅದೇ ಸ್ಥಳದಲ್ಲಿ ಅಳವಡಿಸಿ, ಹಿರಿಯ ಅಧಿಕಾರಿಗಳ ಮುಂದೆ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಘಟನೆ ಪೊನ್ನಂಪೇಟೆ ಸಮೀಪ ನಡೆದಿದೆ.
ದೇಶ ಕಾಯುವ ಸೈನಿಕ ತನ್ನ ನಿವೃತ್ತಿಯ ನಂತರ ತನಗೊಂದು ವಾಸಿಸಲು ಮನೆ ಬೇಕೆಂಬ ಕನಸಿನೊಂದಿಗೆ ಪೊನ್ನಂಪೇಟೆಯ ಸಮೀಪವಿರುವ ಸಾಯಿ ಬಡಾವಣೆ ಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಪೊಕ್ಕಳಿಚಂಡ ದಿಲನ್ ಎಂಬವರು ಕಳೆದೆರಡು ವರ್ಷಗಳ ಹಿಂದೆ ನಿವೇಶನ ವೊಂದನ್ನು ಖರೀದಿ ಮಾಡಿದ್ದರು. ಈ ವೇಳೆ ಇರುವ ನಿವೇಶನದಲ್ಲಿ ಯಾವುದೇ ವಿದ್ಯುತ್ ಮಾರ್ಗಗಳು ಹಾದುಹೋಗಿರಲಿಲ್ಲ. ಆದರೆ ಕೆಲವು ತಿಂಗಳಿAದ ತಾವು ಖರೀದಿಸಿದ ತಮ್ಮ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದರು.
ನಿವೇಶನದ ಬಳಿಹೋದ ಸಂದರ್ಭ ಇವರಿಗೆ ಆಶ್ಚರ್ಯ ಕಾದಿತ್ತು. ನಿವೇಶನ ಮೇಲ್ಭಾಗದಲ್ಲಿ ೩೩ ಕೆವಿ ವಿದ್ಯುತ್ ನಿವೇಶನ ಮೇಲ್ಭಾಗದಿಂದ ಹಾದುಹೋಗಿತ್ತು. ಇದನ್ನು ಕಂಡ ನಿವೇಶನ ಮಾಲೀಕರು ಈ ಬಗ್ಗೆ ಬಡಾವಣೆಯ ಮಾಲೀಕ ರನ್ನು ವಿಚಾರಿಸಿದಾಗ, ಇದನ್ನು ಬದಲಾಯಿಸುವುದಾಗಿ ಸಬೂಬು ಹೇಳುತ್ತ ದಿನ ಕಳೆಯಲಾರಂಭಿಸಿದರು. ಆದರೆ ಮನೆ ನಿರ್ಮಾಣಕ್ಕೆ ವಿದ್ಯುತ್ ಲೈನ್ ಅಡಚಣೆಯಾಗುವುದರಿಂದ ಗುತ್ತಿಗೆ ಪಡೆದ ಗುತ್ತಿಗೆದಾರ ಮನೆ ನಿರ್ಮಿಸಲು ಹಿಂದೇಟು ಹಾಕಿದ್ದರು. ಈ ವೇಳೆ ದಿಕ್ಕೇ ತೋಚದಂತಾದ ನಿವೇಶನದ ಮಾಲೀಕ ನೇರವಾಗಿ ರೈತ ಸಂಘದ ಅಧ್ಯಕ್ಷರಿಗೆ ತನ್ನ ನೋವನ್ನು ಲಿಖಿತ ಮೂಲಕ ತಿಳಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಇದರಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಪ್ರಕರಣವನ್ನು ಚೆಸ್ಕಾಂನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಮುಖಂಡರು ಪ್ರಸ್ತಾಪಿಸುತ್ತಿದ್ದಂತೆಯೇ ಕಿರಿಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗದುಕೊಳ್ಳುವ ಮೂಲಕ ವಾರದ ಗಡುವು ನೀಡಿ ಎಚ್ಚರಿಕೆ ನೀಡಿದ್ದರು. ತಪ್ಪಿದಲ್ಲಿ ಕೂಡಲೇ ಕೆಲಸದಿಂದ ವಜಾ ಮಾಡುವುದಾಗಿ ತಿಳಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಶ್ರೀಮಂಗಲ ಚೆಸ್ಕಾಂ ಕಿರಿಯ ಇಂಜಿನಿಯರ್ ವಿಜಯ್ ಕುಮಾರ್ ಸಿಬ್ಬಂದಿಗಳ ಸಹಕಾರದಿಂದ ಇರುವ ವಿದ್ಯುತ್ ಲೈನ್ ಅನ್ನು ಬದಲಾಯಿಸಿ ಈ ಹಿಂದೆ ಇದ್ದ ಸ್ಥಳದಲ್ಲಿಯೇ ಮರು ವಿದ್ಯುತ್ ಕಂಬವನ್ನು ನಿರ್ಮಿಸಿ ವಿದ್ಯುತ್ ಲೈನ್ ಹಾದುಹೋಗುವಂತೆ ವ್ಯವಸ್ಥೆ ಮಾಡಿದರು.
ಕಳೆದ ೨೫ ವರ್ಷಗಳಿಂದ ಶ್ರೀಮಂಗಲ, ಕುಟ್ಟ, ಮಾರ್ಗಕ್ಕೆ ಪೊನ್ನಂಪೇಟೆಯಿAದ ಪ್ರಸ್ತುತವಿರುವ ಸಾಯಿ ಬಡಾವಣೆಯ ಮೇಲ್ಭಾಗ ದಿಂದ ೩೩ ಕೆವಿ ವಿದ್ಯುತ್ ಲೈನ್ ಹಾದು ಹೋಗುತ್ತಿತ್ತು. ಈ ಬಡಾವಣೆಯಲ್ಲಿ ವಿದ್ಯುತ್ ಲೈನ್ ಇದ್ದ ಕಾರಣ ಹಲವು ನಿವೇಶನಗಳು ಹಾಗೆಯೇ ಮಾರಾಟ ವಾಗದೆ ಉಳಿದಿದ್ದವು. ಇದರಿಂದ ಬಡಾವಣೆಯ ಮಾಲೀಕರಿಗೆ ವಿದ್ಯುತ್ ಲೈನ್ ಅನ್ನು ಬದಲಾಯಿಸದೆ ಬೇರೆ ದಾರಿ ಇರಲಿಲ್ಲ. ಆದ ಕಾರಣ ೩೩ ವಿದ್ಯುತ್ ಲೈನ್ ಬದಲಾಯಿಸಲು ಕಳೆದ ಎಂಟು ವರ್ಷಗಳಿಂದ ಶ್ರೀಮಂಗಲ ಚೆಸ್ಕಾಂನಲ್ಲಿ ಕಿರಿಯ ಇಂಜಿನಿಯರ್ ಅವರನ್ನು ಬಳಸಿ ಕೊಂಡು ಈ ಕೆಲಸ ನಿರ್ವಹಿಸಲಾ ಗಿತ್ತು. ಆದರೆ, ಕಿರಿಯ ಇಂಜಿನಿಯರ್ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಕಳೆದ ೨೫ ವರ್ಷಗಳಿಂದ ಹಾದುಹೋಗುತ್ತಿದ್ದ ವಿದ್ಯುತ್ ಲೈನ್ ಅನ್ನು ಏಕಾಏಕಿ ಮಾರ್ಪಡಿಸಿ ರಾತ್ರೋರಾತ್ರಿ ಬದಲಾಯಿಸಿ ಬಡಾವಣೆಯ ಮಾಲೀಕರಿಗೆ ಬೇಕಾದ ರೀತಿಯಲ್ಲಿ ಅನುಕೂಲ ಕಲ್ಪಿಸಿಕೊಟ್ಟಿ ದ್ದರು. ಆದರೆ ನಿವೇಶನ ಖರೀದಿಸಿದ್ದ ಯೋಧನಿಗೆ ಈ ವಿಷಯ ತಿಳಿಯುತ್ತಿದ್ದಂತೆಯೇ ಇದೀಗ ಈ ಹಿಂದೆ ಇದ್ದ ರೀತಿಯಲ್ಲಿಯೇ ವಿದ್ಯುತ್ ಲೈನ್ ಇದ್ದ ಸ್ಥಳದಲ್ಲಿಯೇ ಮರುಸ್ಥಾಪಿಸುವ ಮೂಲಕ ಮಾಡಿದ ಪ್ರಮಾದಕ್ಕೆ ರೈತ ಮುಖಂಡರ ಬಳಿ ಕ್ಷಮೆ ಕೋರಿದ್ದಾರೆ.
ರಾಜ್ಯ ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷರಾದ ಆಲೆಮಾಡ ಮಂಜುನಾಥ್ ಹಾಗೂ ಇತರ ಪದಾಧಿಕಾರಿಗಳು ಸಾಮಾಜಿಕ ಕಳಕಳಿಯ ಹಿನೆÀ್ನಲೆಯಲ್ಲಿ ದೇಶ ಕಾಯುವ ಯೋಧನ ಸಹಾಯಕ್ಕೆ ನಿಲ್ಲುವ ಮೂಲಕ ಹಿರಿಯ ಅಧಿಕಾರಿಗಳ ಗಮನ ಸೆಳೆದು ಯೋಧನಿಗೆ ಆದ ಅನ್ಯಾಯವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ಮುಂಜಾನೆ ಇಂಜಿನಿಯರ್ ಸಮ್ಮುಖದಲ್ಲಿ ಹಲವು ಚೆಸ್ಕಾಂ ಸಿಬ್ಬಂದಿಗಳು ೩೩ ಕೆವಿ ವಿದ್ಯುತ್ ಲೈನ್ ಅನ್ನು ಮರುಸ್ಥಾಪಿಸಿ ದರು. ಈ ಸಂದರ್ಭ ಸ್ಥಳದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ವಿವಿಧ ಪದಾಧಿಕಾರಿಗಳಾದ ಪೊಕ್ಕಳಿಚಂಡ ಕಾರ್ಯಪ್ಪ, ದೇವಯ್ಯ, ಪೂವಯ್ಯ, ಅಪ್ಪಚ್ಚು, ಪೂಣಚ್ಚ, ಪಡಿಜ್ಞರಂಡ ಗಿರೀಶ್, ಕಾಕೇರ ರವಿ, ಕೊರಕುಟ್ಟೀರ ಉತ್ತಪ್ಪ, ವಿನೋದ್, ಹೆಚ್.ಪಿ. ಮಂಜು ಮತ್ತಿತರರು ಹಾಜರಿದ್ದರು.