ಕರಿಕೆ, ನ. ೬ : ದೇಶಾದ್ಯಂತ ಕೋವಿಡ್ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು ಜನರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳುತ್ತಿದ್ದು ಕೊರೊನಾ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂದಿರುತ್ತದೆ. ಆದರೆ ಕೊಡಗಿನ ಗಡಿ ಕರಿಕೆ ಗ್ರಾಮ ಪಂಚಾಯಿತಿ ಯ ಒಂದನೇ ವಾರ್ಡಿನಲ್ಲಿ ಲಸಿಕೆ ಪಡೆಯಲು ಜನರು ಮುಂದೆಬಾರದ ಹಿನ್ನೆಲೆ ಯಲ್ಲಿ ಪೊಲೀಸರ ಸಹಕಾರದಿಂದ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆ ತೆರಳಿ ಲಸಿಕೆ ನೀಡಿದರು. ಗ್ರಾ.ಪಂ.ಆಡಳಿತದ ಮಂಡಳಿ ನಿದ್ದೆ ಯಿಂದ ಎಚ್ಚೆತ್ತುಕೊಂಡು ಕೂಡಲೇ ಲಸಿಕೆಯನ್ನು ಪೂರ್ಣ ಗೊಳಿಸಲು ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಶೇ ನೂರರಷ್ಟು ಲಸಿಕೆ ಹಾಕುವ ಮೂಲಕ ಗ್ರಾಮವನ್ನು ಪೂರ್ಣ ಲಸಿಕೆ ಪಡೆದ ಮಾದರಿ ಗ್ರಾಮವನ್ನಾಗಿ ಮಾಡಬೇಕಿದೆ.