ಮಡಿಕೇರಿ, ನ. ೬: ಬಲಿಪಾಡ್ಯಮಿ ಪ್ರಯುಕ್ತ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಡುವ ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸಬೇಕೆಂದು ಸರಕಾರದ ಆದೇಶವಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಪಾಡಿ ಇಗ್ಗುತ್ತಪ್ಪ, ಇರ್ಪು ರಾಮೇಶ್ವರ, ಓಂಕಾರೇಶ್ವರ, ತಲಕಾವೇರಿ ಕ್ಷೇತ್ರ, ಭಾಗಮಂಡಲ ಭಗಂಡೇಶ್ವರ ಸನ್ನಿಧಿಯಲ್ಲಿ, ಪಾಲೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು. ಇಲಾಖೆಯ ಅಧೀನಕ್ಕೆ ಒಳಪಡದ ಸಾಕಷ್ಟು ದೇವಾಲಯಗಳಲ್ಲಿ, ಗೋಶಾಲೆಯಲ್ಲಿ, ಪಶುವೈದ್ಯ ಆಸ್ಪತ್ರೆಯಲ್ಲೂ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ ನಮಿಸಲಾಯಿತು.
ಭಾಗಮಂಡಲ: ಸರ್ಕಾರದ ಆದೇಶದಂತೆ ಧಾರ್ಮಿಕ ಕ್ಷೇತ್ರಗಳಾದ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಗೋಪೂಜೆ ನೆರವೇರಿಸಲಾಯಿತು. ಶುಕ್ರವಾರ ಸಂಜೆ ೫.೩೦ ರಿಂದ ೬.೩೦ ರವರೆಗೆ ಗೋಧೂಳಿ ಲಗ್ನದಲ್ಲಿ ಪೂಜೆ ನೆರವೇರಿಸಲಾಯಿತು. ತಕ್ಕರಾದ ಕೋಡಿಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಅರ್ಚಕರಾದ ರವಿ ಭಟ್, ಹರೀಶ್, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪಾರುಪತ್ತೆಗಾರ ಪೊನ್ನಣ್ಣ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಪಾಡಿ ಇಗ್ಗುತ್ತಪ್ಪ
ನಾಪೋಕ್ಲು: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದಂತೆ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಬಲಿಪಾಡ್ಯಮಿಯಂದು ಸಂಜೆ ಗೋಪೂಜೆ ನಡೆಸಲಾಯಿತು.
ಇರ್ಪು ದೇವಾಲಯದಲ್ಲಿ
ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಗೋ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯ ಅಧ್ಯಕ್ಷ ಮದ್ರಿರ ಪಿ. ವಿಷ್ಣು, ಪಾರು ಪತ್ತೆಗಾರರಾದ ಅಜ್ಜಮಾಡ ಎನ್. ಅಣ್ಣಯ್ಯ, ಶ್ರೀಮಂಗಲ ರೆವಿನ್ಯೂ ಅಧಿಕಾರಿಗಳಾದ ಪೂಣಚ್ಚ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.
ಮೂರ್ನಾಡಿನಲ್ಲಿ
ಮೂರ್ನಾಡುವಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಗೋಪೂಜೆ ಹಾಗೂ ದೀಪಲಕ್ಷಿ÷್ಮÃ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು.
ವಿಶ್ವ ಹಿಂದೂ ಪರಿಷದ್, ಭಜರಂಗದಳ,
(ಮೊದಲ ಪುಟದಿಂದ) ದುರ್ಗಾವಾಹಿನಿಯ ಜಿಲ್ಲಾ ಘಟಕದ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿಷತ್‌ನ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಎಸ್. ಸುರೇಶ್ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ದುರ್ಗಾವಾಹಿನಿಯ ಜಿಲ್ಲಾ ಸಂಯೋಜಕಿ ಅಂಬಿಕಾ ಉತ್ತಪ್ಪ, ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಮಹಾಭಲೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.ಸೋಮವಾರಪೇಟೆ: ಪಟ್ಟಣದ ಆಂಜನೇಯಸ್ವಾಮಿ ದೇವಾಲಯ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ಗೋ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಆಂಜನೇಯ ದೇವಾಲಯದಲ್ಲಿ ಆಯೋಜಿಸಿದ್ದ ಪೂಜೋತ್ಸವದಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಬನ್ನಳ್ಳಿ ಗೋಪಾಲ್, ಸೀತಾರಾಂ, ನಂದಕುಮಾರ್, ರಾಘವ, ಅಭಿಮನ್ಯುಕುಮಾರ್, ಹಾಲಪ್ಪ, ಉಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ಗೋಪೂಜೆ ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ಶೆಟ್ರು ಮೃತ್ಯುಂಜಯ, ಅಕ್ಕನ ಬಳಗದ ಜಲಜಾ ಶೇಖರ್, ಪ್ರಮುಖರಾದ ಯುವರಾಜ್, ಮಲ್ಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಮಾದಾಪುರ ಪಶು ವೈದ್ಯ ಆಸ್ಪತ್ರೆಯಲ್ಲಿ ಗೋಪೂಜೆ ನೆರವೇರಿಸಲಾಯಿತು. ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಗೋವಿಗೆ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳಾದ ಎಸ್.ವಿ. ಬಾದಾಮಿ, ವಸಂತ, ಸತ್ತರ್ ಖಾನ್, ಹಿಂದೂ ಜಾಗರಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸುನಿಲ್ ಮಾದಾಪುರ, ಕಾರ್ಯದರ್ಶಿ ವಿನಯ್ ಕುಮಾರ್, ಅಕ್ಷಯ್, ವಿನು, ಮಂಜು, ಅವಿನಾಶ್ ಮತ್ತಿತರರು ಇದ್ದರು. ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬಲಿಪಾಡ್ಯಮಿಯ ಪ್ರಯುಕ್ತ ಗೋಪೂಜೆ ಹಾಗೂ ತುಳಸಿಪೂಜೆಯನ್ನು ಮಾಡಲಾಯಿತು.
ಗೋವಿಗೆ ಆರತಿಯನ್ನು ಬೆಳಗಿ ಪೂಜಿಸಲಾಯಿತು. ಲಕ್ಷಿö್ಮಯ ಪ್ರತಿರೂಪವಾದ ತುಳಸಿಯನ್ನು ಪೂಜಿಸಿ ಮಹಾಮಂಗಳಾರತಿ ಮಾಡಲಾಯಿತು. ದೇವಸ್ಥಾನದ ಅರ್ಚಕ ವಿಶ್ವನಾಥ್ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪೆರಾಜೆ: ಹಿಂದೂ ಜಾಗರಣಾ ವೇದಿಕೆ ಪೆರಾಜೆ ವತಿಯಿಂದ ಇಲ್ಲಿಯ ಶ್ರೀ ಶಾಸ್ತಾವು ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅರ್ಚಕ ವೆಂಕಟರಮಣ ಕೆ. ಪಾಂಙಣ್ಣಾಯ ಮತ್ತು ವೃಂದದವರಿAದ ಪೂಜಾ ಕಾರ್ಯ ನಡೆಯಿತು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಪೆರಾಜೆ ಘಟಕದ ಅಧ್ಯಕ್ಷ ರಂಜಿತ್ ಲಿಂಗರಾಜನಮನೆ, ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಷ್‌ಚಂದ್ರ ವೀರಾಜಪೇಟೆ: ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ತಾಲೂಕು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದಲ್ಲಿರುವ ಶ್ರೀ ಕಾವೇರಿ ಗೋಶಾಲಾ ಟ್ರಸ್ಟ್ನ ಗೋಶಾಲೆಯಲ್ಲಿ ಗೋಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಗೋಪೂಜಾ ಉತ್ಸವದಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಪಿ. ಕೃಷ್ಣ ಮೂರ್ತಿ, ಶ್ರೀ ಕಾವೇರಿ ಗೋಶಾಲ ಟ್ರಸ್ಟ್ನ ಬಲ್ಲಚಂಡ ರಂಜು ಬಿದ್ದಪ್ಪ ಗೋಪೂಜೆಯನ್ನು ಸಂಘಟನೆಗಳ ವತಿಯಿಂದ ನೆರೆವೆರಿಸಿದ್ದಾರೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಧ್ಯಕ್ಷ ಸುರೇಶ್ ಮುತ್ತಪ್ಪ, ಭಜರಂಗದಳ ಜಿಲ್ಲಾ ಸಹ ಸಂಚಾಲಕ ವಿವೇಕ್ ರೈ, ದುರ್ಗಾವಾಹಿನಿ ಸಂಘಟನೆಯ ಜಿಲ್ಲಾ ಸಂಚಾಲಕಿ ಅಂಬಿಕಾ ಉತ್ತಪ್ಪ, ತಾಲೂಕು ಗೋ ರಕ್ಷಕ್ ಪ್ರಮುಖ್ ಸಜನ್, ಭಜರಂಗದಳ ನಗರ ಸಂಚಾಲಕ ಕಿಶನ್ ಮತ್ತು ನಗರ ಸಹ ಸಂಚಾಲಕ ನಿತಿನ್ ಹಾಗೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಗೋಶಾಲೆಯ ಸಿಬ್ಬಂದಿಗಳು ಹಾಜರಿದ್ದರು.