ಪೊನ್ನಂಪೇಟೆ, ನ. ೬ : ಇತ್ತೀಚೆಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ತೋರಿದ ಪೊನ್ನಂಪೇಟೆ ನಾಟ್ಯಸಂಕಲ್ಪ ನೃತ್ಯ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸೋಲೋ ನೃತ್ಯದಲ್ಲಿ ಪ್ರೇಕ್ಷ ಅಶೋಕ್ ಭಟ್, ಹಿತೈಷಿ ನಾಣಯ್ಯ, ಟಿ.ಹೆಚ್. ತನಿಷ್ಕ ಚಿನ್ನದ ಪದಕ, ತನ್ವಿ ಕಾವೇರಮ್ಮ ಬೆಳ್ಳಿ ಪದಕ, ಡುಯೆಟ್‌ನಲ್ಲಿ ಗ್ರೀಷ್ಮ- ಪ್ರೇಕ್ಷ ಜೋಡಿ ಪ್ರಥಮ, ಸಂಜನಾ-ಸ್ಪAದನಾ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಮೂಹ ನೃತ್ಯ, ಭರತನಾಟ್ಯ, ಜಾನಪದ ನೃತ್ಯಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ನಾಟ್ಯ ಸಂಕಲ್ಪ ನೃತ್ಯ ಶಾಲೆಯ ವಿದ್ಯಾರ್ಥಿಗಳು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.