ಮಡಿಕೇರಿ, ನ. ೭: ನಗರಸಭೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ನಗರದ ಜ್ಞಾನದೀಪ ದೈವಜ್ಞ ಮಹಿಳಾ ಸಮಾಜದ ಸದಸ್ಯೆ ಸವಿತಾ ರಾಕೇಶ್ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸವಿತಾ ರಾಕೇಶ್ ನಗರದ ಮೂಲಭೂತ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದರು.
ಸಮಾಜದ ಅಧ್ಯಕ್ಷೆ ಕಾಂಚನಾ ರಾಜೇಶ್, ಕಾರ್ಯದರ್ಶಿ ಪ್ರಿಯಾ ಕಿರಣ್, ಖಜಾಂಚಿ ಗೀತಾ ಮಂಜುನಾಥ್ ಹಾಗೂ ಸಂಘದ ಹಿರಿಯ, ಕಿರಿಯ ಸದಸ್ಯರು ಉಪಸ್ಥಿತರಿದ್ದರು.