ಮಡಿಕೇರಿ, ನ. ೭: ಜಿಲ್ಲೆಯ ಪವಿತ್ರ ಕ್ಷೇತ್ರವಾಗಿರುವ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ತೀರ್ಥೋ ದ್ಭವದ ಬಳಿಕ ಜಿಲ್ಲೆಯ ಸ್ಥಳೀಯ ಭಕ್ತಾದಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ತಮ್ಮ ಕೈಂಕರ್ಯ ನೆರವೇರಿ ಸುತ್ತಿರುವುದು ಕಂಡುಬರು ತ್ತಿದೆ. ಕಳೆದ ರಜಾ ದಿನಗಳಲ್ಲಿ ಒಂದಷ್ಟು ಪ್ರವಾಸಿ ಗರು ಹೆಚ್ಚಾಗಿ ಕಂಡುಬAದರೂ ಇತರ ದಿನಗಳಲ್ಲಿ ಸ್ಥಳೀಯರೇ ಭೇಟಿಯಿತ್ತು ತಮ್ಮ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಅ. ೧೭ ರಂದು ತೀರ್ಥೋದ್ಭವ ಜರುಗಿದ್ದು, ನಂತರದ ಎಲ್ಲಾ ದಿನಗಳಲ್ಲಿ ಸ್ಥಳೀಯರು ಭೇಟಿ ನೀಡುತ್ತಿದ್ದಾರೆ. ಆದರೆ ಹೆಚ್ಚಿನ ಒತ್ತಡಗಳು ಇಲ್ಲದಂತಿವೆ. ತಾ. ೧೬ ರಂದು ಕಿರು ಷಷ್ಠಿ ತನಕವೂ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.