ಅಧ್ಯಕ್ಷರಿಂದ ಮಾಹಿತಿ

*ಗೋಣಿಕೊಪ್ಪ, ನ. ೭: ಪಂಚಾಯಿತಿಯಿAದ ನಡೆಯುತ್ತಿದ್ದ ಪ್ರಗತಿ ಕಾರ್ಯಗಳ ಬಗ್ಗೆ ಆಶಾ ಭಾವನೆ ಕಳೆದುಕೊಂಡಿದ್ದ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಸದಸ್ಯರುಗಳು ದೀಪಾವಳಿಯ ಕೊಡುಗೆಯಾಗಿ ಅಭಿವೃದ್ಧಿ ಯೋಜನೆಯ ಅನುಷ್ಠಾನಗಳ ಬಗ್ಗೆ ಹೊಸ ಭರವಸೆ ನೀಡಿದ್ದಾರೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಅವರು ಕಳೆದ ಮೂರು ತಿಂಗಳ ಪಂಚಾಯಿತಿ ಆಡಳಿತ ಅವಧಿಯಲ್ಲಿ ನಡೆದ ಪ್ರಗತಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.

ಕಳೆದ ಸಾಲಿನ ಆಡಳಿತದಲ್ಲಿ ಉಳಿಸಿಕೊಂಡಿದ್ದ ೬೫ ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ಲನ್ನು ಪಾವತಿಸಿ ಪಂಚಾಯಿತಿ ಅನುದಾನ ದಿಂದ ಶೇ. ೧ರಷ್ಟು÷ ಬಡ್ದಿ ವಿದ್ಯುತ್ ಬಿಲ್ಲಿನಿಂದ ಸೋರಿಕೆಯಾಗುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ೮ ವಿಭಾಗಗಳಲ್ಲಿ ೨೧,೦೯,೪೩೩ ರೂಪಾಯಿಗಳನ್ನು ರಸ್ತೆ, ಚರಂಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವ ಶೌಚಾಲಯ ವ್ಯವಸ್ಥೆಗಳನ್ನು ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ಸಮರ್ಪಕವಾಗಿ ಬಳಕೆಯಾಗಿದೆ, ಒಂದು, ಎರಡು, ಮೂರನೇ ವಾರ್ಡಿನ ೨೦೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ಕೆ ಪಂಚಾಯಿತಿ ಮುಂದಾಗಿರುವುದು ಗ್ರಾ.ಪಂ.ನ ಸರ್ವ ಸದಸ್ಯರ ಮೂರು ತಿಂಗಳ ಅವಧಿಯ ಆಡಳಿತದ ಹೆಮ್ಮೆ ಎಂದು ಪಂಚಾಯಿತಿಯ ಪ್ರಗತಿ ಕಾರ್ಯಗಳ ಬಗ್ಗೆ ಶ್ಲಾಘಿಸಿದರು.

ಪಂಚಾಯಿತಿ ಅಭಿವೃದ್ಧಿಯತ್ತ ಸಾಗಲು ಪಟ್ಟಣದಲ್ಲಿ ವ್ಯಾಪಾರ ನಡೆಸುತ್ತಿರುವವರು ವ್ಯಾಪಾರದ ಮತ್ತು ಮಳಿಗೆಯ ಪರವಾನಗಿಯನ್ನು ನವೀಕರಣಗೊಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅಧ್ಯಕ್ಷರು ನಿರ್ಲಕ್ಷ÷್ಯ ತೋರಿದ್ದಲ್ಲಿ ವ್ಯಾಪಾರಕ್ಕೆ ಅನುಮತಿ ನೀಡುವುದಿಲ್ಲ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪಂಚಾಯಿತಿ ಮುಂದಾಗಲಿದೆ ಎಂದು ಎಚ್ಚರಿಕೆಯ ಕರೆ ನೀಡಿದ್ದಾರೆ. ಬಹಳಷ್ಟು ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿನ ಶೌಚಾಲಯಗಳ ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದಿದ್ದು, ಈ ಬಗ್ಗೆ ಪಂಚಾಯಿತಿ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಮಾಲೀಕರು ಕಾಡುಗಳನ್ನು ಕಡಿದು ಬೇಲಿ ಅಥವಾ ಕಾಂಪೌAಡ್‌ಗಳನ್ನು ಅಳವಡಿಸಿ ನಿವೇಶನದ ಭದ್ರತೆಯನ್ನು ಕಾಪಾಡಿಕೊಳ್ಳಬೇಕು.

ಖಾಲಿಬಿಟ್ಟ ನಿವೇಶನಗಳಲ್ಲಿ ಸಾರ್ವಜನಿಕರು ಕಸಗಳನ್ನು ಸುರಿಯುತ್ತಿರುವುದರಿಂದ ಪಟ್ಟಣಗಳಲ್ಲಿ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಮಾಲೀಕರು ಗಂಭೀರವಾಗಿ ಪರಿಗಣಿಸಿ ತಮ್ಮ ನಿವೇಶನಗಳನ್ನು ಸ್ವಚ್ಛವಾಗಿಡಲು ಮುಂದಾಗಬೇಕೆAದು ಮನವಿ ಮಾಡಿದ್ದಾರೆ. ಗ್ರಾ.ಪಂ. ಸದಸ್ಯರಾದ ಬಿ.ಎನ್. ಪ್ರಕಾಶ್, ಕೆ. ರಾಜೇಶ್, ರಾಮಕೃಷ್ಣ ಭಟ್, ರತಿ ಅಚ್ಚಪ್ಪ, ಪುಷ್ಪಾ ಮನೋಜ್, ಕೊಣಿಯಂಡ ಬೋಜಮ್ಮ, ಹಕೀಂ, ವಿವೇಕ್ ರಾಯ್ಕರ್, ಸೌಮ್ಯಬಾಲು ಉಪಸ್ಥಿತರಿದ್ದರು.

- ಎನ್.ಎನ್. ದಿನೇಶ್