ಗೋಣಿಕೊಪ್ಪ ವರದಿ, ನ. ೬: ಕಾಫಿ ಕದ್ದು ಮಾರಾಟ ಆರೋಪದಡಿ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಮೇಲಿರುವ ಆಡಳಿತಾತ್ಮಕ ಲೋಪ ಆರೋಪ ಪ್ರಶ್ನಿಸಿ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಎಂದು ಸಂಘದ ನಿರ್ದೇಶಕರು ತಿಳಿಸಿದ್ದಾರೆ.
ಸಂಘವು ಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿರುವ ೫೦ ಎಕರೆ ಕಾಫಿ ತೋಟದಿಂದ ಕಾಫಿ ಕದ್ದು ಮಾರಾಟ ಮಾಡಲಾಗಿದೆ ಎಂಬ ಆರೋಪ ನಿರಾಧಾರ. ಸಹಕಾರ ಸಂಘದ ಸಹಾಯಕ ರಿಜೆಸ್ಟರ್ ಕೂಡ ನಮ್ಮ ಸಂಘದ ಮೇಲೆ ಆಡಳಿತಾತ್ಮಕ ಲೋಪವಾಗಿರುವ ಬಗ್ಗೆ ನಿರ್ಧರಿಸಿ ಆದೇಶ ಹೊರಡಿಸಿದ್ದಾರೆ. ನಮ್ಮಲ್ಲಿ ತಪ್ಪು ನಡೆಯದ ಕಾರಣ ನ್ಯಾಯಾಲಯದ ಮೂಲಕ ಪ್ರಶ್ನಿಸಲು ಮುಂದಾಗಿದ್ದೇವೆ. ಉಚ್ಚ ನ್ಯಾಯಾಲಯ ವಕೀಲ ಬಿ.ಎಸ್. ಸಚಿನ್ ಮೂಲಕ ತಡೆಯಾಜ್ಞೆ ತರಲಾಗಿದ್ದು, ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಸಂಘದ ಉಪಾಧ್ಯಕ್ಷ ಕೆ.ಸಿ. ಮುತ್ತಪ್ಪ, ನಿರ್ದೇಶಕರುಗಳಾದ ಕೆ.ಆರ್. ಸುರೇಶ್, ಸಿ.ಬಿ. ಬೆಳ್ಯಪ್ಪ, ಎಂ.ಕೆ. ರವಿ, ಭರತ್ ಮಾಚಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.