ಕೂಡಿಗೆ, ನ. ೬: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಪರಮ ಪೂಜ್ಯ ಸದ್ಗುರು ಅಪ್ಪಯ್ಯ ಸ್ವಾಮಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸದ್ಗುರು ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಸಿ, ದುರ್ಗಶ್ ವಹಿಸಿದರು. ಶಿಕ್ಷಕ ಎ.ಪಿ. ಸೋಮಯ್ಯ ಅಪ್ಪಯ್ಯ ಸ್ವಾಮಿ ಅವರ ಅಧ್ಯಾತ್ಮಿಕ ಜೀವನ, ಮತ್ತು ಸಾಧನೆಯನ್ನು ಸ್ಮರಿಸಿದರು. ಶಿಕ್ಷಕಿ ಮೋಹನೆÀಶ್ವರಿ ಗೀತ ಗಾಯನ ಮಾಡಿದರು. ವಿದ್ಯಾರ್ಥಿಗಳಿಂದ ಹಾಡುಗಾರಿಕೆ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ಶಿವಪ್ರಸಾದ್, ಸುಲೋಚನ, ಸುರೇಶ್, ಪುಷ್ಪ, ಕುಸುಮ, ಹೇಮಲತಾ ಉಪಸ್ಥಿತರಿದ್ದರು.