ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ದೀಪಾವಳಿ ಹಿನ್ನೆಲೆ ಮನೆ, ಅಂಗಡಿಗಳನ್ನು ಶುಚಿಗೊಳಿಸಿ, ದೀಪಗಳನ್ನು ಹಚ್ಚಿ ಸಂಭ್ರಮದಿAದ ಆಚರಿಸಲಾಯಿತು. ಧನಲಕ್ಷಿö್ಮÃ ಪೂಜೆ, ನರಕ ಚತುರ್ದಶಿ ಹಾಗೂ ದೀಪಾವಳಿಯ ಸಂಭ್ರಮ ಎಲ್ಲೆಡೆ ಕಂಡುಬAತು. ಹಬ್ಬದ ಅಂಗವಾಗಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ಪಟಾಕಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಪಟ್ಟಣದ ಅಂಗಡಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ಧನಲಕ್ಷಿö್ಮÃ ಪೂಜೆ ನೆರವೇರಿತು. ಅಂಗಡಿ ಮುಂಗಟ್ಟು, ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸುಂಟಿಕೊಪ್ಪ : ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷದ್ ಹಾಗೂ ಶ್ರೀ ಗೌರಿ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಶ್ರೀ ಕೊದಂಡರಾಮ ಮಂದಿರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ದೀಪಾವಳಿಯ ೩ ದಿನಗಳ ಕಾಲ ವಿಶೇಷ ಪೂಜೆಯನ್ನು ದರ್ಶನ್ ಭಟ್, ಮನೋಜ್ ಭಟ್ ಹಾಗೂ ನಿಖಿತ್ ಭಟ್ ಪೂಜಾ ಕೈಂಕರ್ಯಗಳನ್ನು ನಡೆಸಿದರು.
ಈ ಸಂದರ್ಭ ಶ್ರೀ ಗೌರಿ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್, ಉಪಾಧ್ಯಕ್ಷರುಗಳಾದ ಎಂ.ಆರ್. ಶಶಿಕುಮಾರ್, ಪಿ. ಲೋಕೇಶ್, ಎಸ್.ರವಿ, ಎಸ್. ವಿಘ್ನೇಶ್, ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸುರೇಶ್‌ಗೋಪಿ, ಎಸ್. ಪೃಥ್ವಿರಾಜ್, ಗುಣಶೇಖರ್, ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಇದ್ದರು. ಕೊಡ್ಲಿಪೇಟೆ : ಇಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಹಸಿರು ದೀಪಾವಳಿಯನ್ನು ಆಚರಿಸಲಾಯಿತು.
ಜ್ಞಾನದ ದೀವಿಗೆಯನ್ನು ಹಚ್ಚಿ, ಪರಿಸರ ಸ್ನೇಹಿಯಾಗಿ ದೀಪಾವಳಿ ಯನ್ನು ಆಚರಿಸುವ ಮೂಲಕ ಸಮಾಜಕ್ಕೆ ಹಸಿರು ದೀಪಾವಳಿಯ ಸಂದೇಶ ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಗ್ರಂಥಾಲಯದ ಮೇಲ್ವಿಚಾರಕಿ ಮಮತ ತಿಳಿಸಿದರು.
ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬ ಮನಕೆ ಹರುಷ ತರಲಿ, ಮನದ ಅಂಧಕಾರ ಅಳಿಸಿ ಜ್ಞಾನದ ಜ್ಯೋತಿ ಬೆಳಗಿಸುವ ಹಸಿರು ದೀಪಾವಳಿಯನ್ನು ಉತ್ತೇಜಿಸುವಂತಾ ಗಲಿ. ಪರಿಸರಕ್ಕೆ ಮಾರಕವಾಗುವ ಪಟಾಕಿಗಳ ಬಳಕೆ ತಗ್ಗಲಿ, ಹೂವಿನೊಂದಿಗೆ ದೀಪಗಳನ್ನು ಬೆಳಗಿಸಿ ಹಬ್ಬವನ್ನು ಸಂಭ್ರಮಿಸಲಿ ಎಂಬ ಉದ್ದೇಶದಿಂದ ಹಸಿರು ದೀಪಾವಳಿ ಆಚರಿಸಲಾಯಿತು.
ಗ್ರಂಥಾಲಯದ ಸಿಬ್ಬಂದಿಗಳು ಹಸಿರು ಧಿರಿಸು ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಅರ್ಥಪೂರ್ಣವಾಗಿ ಹಸಿರು ದೀಪಾವಳಿ ಆಚರಿಸಿದರು. ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಿಲ್ಪ, ಸಿಬ್ಬಂದಿ ದೀಪಕ್ ಸೇರಿದಂತೆ ಇತರರು ಹಾಜರಿದ್ದರು.ಸಹಯೋಗದೊಂದಿಗೆ ದೀಪಾವಳಿ ಪ್ರಯುಕ್ತ ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ವಠಾರದಲ್ಲಿ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ೯ ಗಂಟೆಗೆ ಸರಿಯಾಗಿ ಕಳಗಿ ವೆಂಕಪ್ಪ ನೆರವೇರಿಸಿದರು. ವೇದಿಕೆಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷ ಶಭರೀಶ್ ಕುದ್ಕುಳಿ, ಅಧ್ಯಕ್ಷ ಕೊರಗಪ್ಪ ಅರಮನೆತೋಟ ಉಪಸ್ಥಿತರಿದ್ದರು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಪಂಚಾನನ ಗೆಳತಿಯರ ಬಳಗ ಹಾಗೂ ದ್ವಿತೀಯ ಸ್ಥಾನವನ್ನು ಶ್ರೀ ವಿಷ್ಣು ಗೆಳತಿಯರ ಬಳಗ ಪಡೆದುಕೊಂಡಿತ್ತು, ಜಿ.ಕೆ. ಸುಬ್ರಮಣ್ಯ ಭಟ್ ಇವರ ಗದ್ದೆಯಲ್ಲಿ ಪುರುಷರ ಕೆಸರುಗದ್ದೆ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಪತಂಜಲಿ ಸಂಪಾಜೆ ಹಾಗೂ ದ್ವಿತೀಯ ಸ್ಥಾನವನ್ನು ಗರುಡಾ ಪ್ರೆಂಡ್ಸ್ ಸಂಗತಡ್ಕ ಪಡೆದುಕೊಂಡಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಮಿತ್ರ ಬಳಗದ ಅಧ್ಯಕ್ಷ ಜಯಕುಮಾರ್ ಅರಮನೆತೋಟ ವಹಿಸಿದ್ದರು, ಶ್ರೀ ಶಿರಾಡಿ ದೈವಸ್ಥಾನದ ಅಧ್ಯಕ್ಷ ಕುಮಾರ್ ಚೆದ್ಕಾರ್, ಪಯಸ್ವಿನಿ ಸಹಕಾರ ಸಂಘದ ನಿರ್ದೇಶಕ ಡಿ.ಡಿ. ಯಶವಂತ, ಮಾಜಿ ಸೈನಿಕ ಓ.ಆರ್. ಮಾಯಿಲಪ್ಪ ಮತ್ತಿತರರು ಇದ್ದರು. ನಳಿನಿ ಪ್ರಾರ್ಥಿಸಿ, ಪವಿನ ಕೊರಗಪ್ಪ ಸ್ವಾಗತಿಸಿದರು, ಪುರುಷೋತ್ತಮ ಬಾಳೆಹಿತ್ಲು, ಧನಂಜಯ, ಪ್ರಕಾಶ್ ಪಾಟಾಳಿ ನಿರೂಪಿಸಿದರು.
ಕೂಡಿಗೆ : ಕುಶಾಲನಗರ ತಾಲೂಕು ವ್ಯಾಪ್ತಿಯ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸಿದರು.
ಹಬ್ಬದ ಅಂಗವಾಗಿ ಮನೆಗಳ ಮುಂಭಾಗದಲ್ಲಿ ಬಣ್ಣ ಬಣ್ಣದ ರಂಗೋಲಿ ರಚಿಸಿ ಚಂಡುಹೂವುಗಳನ್ನು ಇಟ್ಟು ಅಲಂಕಾರ ಮಾಡಲಾಗಿತು. ಇದರ ಜೊತೆಯಲ್ಲಿ ತಾವು ಸಾಕಿದ ಹಸುಗಳನ್ನು ಸಿಂಗಾರ ಮಾಡಿ ಗೋಪೂಜೆ ಮಾಡಲಾಯಿತು. ಗ್ರಾಮದ ದೇವಾಲಯಗಳಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಂಪಾಚೆ: ಸಂಪಾಜೆ ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಅರಮನೆತೋಟ ಹಾಗೂ ಶ್ರೀ ಮಹಾವಿಷ್ಣು ಮಿತ್ರ ಬಳಗ ಸಂಪಾಜೆ