ಸೋಮವಾರಪೇಟೆ, ನ.೬: ಪಟ್ಟಣದ ರೇಂರ‍್ಸ್ ಬ್ಲಾಕ್‌ನಲ್ಲಿ ಕಳೆದ ಕೆಲ ತಿಂಗಳುಗಳಿAದ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿ ಸ್ನಾನ, ಊಟವಿಲ್ಲದೇ ನಿರ್ಗತಿಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು, ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರೇಂರ‍್ಸ್ ಬ್ಲಾಕ್ ನಿವಾಸಿ ಸಂಜಯ್ ಎಂಬವರು ಕಳೆದ ಕೆಲ ಸಮಯದಿಂದ ಮಾನಸಿಕ ಅಸ್ವಸ್ಥರಾಗಿದ್ದು, ಊಟ, ನಿದ್ರೆ, ನೆಲೆ ಇಲ್ಲದೇ ಗಾಳಿ ಮಳೆಯಲ್ಲೂ ಸಹ ಕಲ್ಲು ಬಂಡೆಯ ಮೇಲೆ ದೈನೇನ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದರು.

ಇದನ್ನು ಗಮನಿಸಿದ ಪ.ಪಂ. ಸದಸ್ಯ ಶುಭಕರ್, ಸ್ಥಳೀಯರಾದ ರಾಜನ್, ಅರುಣ್ ಅವರುಗಳು, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಎನ್. ದೀಪಕ್ ಅವರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಅವರು, ಸಂಘಟನೆಯ ಪದಾಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ, ಪೌರ ಕಾರ್ಮಿಕರು ಹಾಗೂ ಸವಿತಾ ಸಮಾಜದ ಶಂಕರ್ ಅವರ ಸಹಕಾರದೊಂದಿಗೆ ಸಂಜಯ್ ಅವರಿಗೆ ಹೇರ್ ಕಟ್ಟಿಂಗ್ ಹಾಗೂ ಸ್ಥಾನ ಮಾಡಿಸಿ, ಹೊಸ ಬಟ್ಟೆ ಹಾಗೂ ಊಟ ನೀಡಿ ಉಪಚರಿಸಿದ ನಂತರ, ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್ಗೆ ದಾಖಲಿಸಿದರು.

ಮೂರು ದಿನಗಳ ನಡವಳಿಕೆ ನೋಡಿ ಮುಂದಿನ ಚಿಕಿತ್ಸೆಯ ಬಗ್ಗೆ ಕ್ರಮ ವಹಿಸುವುದಾಗಿ ಟ್ರಸ್ಟ್ನ ರಮೇಶ್ ತಿಳಿಸಿದರು. ಕರವೇ ಅಧ್ಯಕ್ಷ ದೀಪಕ್, ಕೆ.ಪಿ. ಸುದರ್ಶನ್, ಸೋಮೇಶ್ ಅವರುಗಳು ಮಾನಸಿಕ ಅಸ್ವಸ್ಥನ ಆರೈಕೆಗೆ ಸಹಕರಿಸಿದರು.