ಮಡಿಕೇರಿ, ನ. ೬: ಗಣರಾಜ್ಯೋತ್ಸವ -೨೦೨೧ ರ ಅಂಗವಾಗಿ ‘ದೇಶಭಕ್ತಿ ಮತ್ತು ರಾಷ್ಟç ನಿರ್ಮಾಣದಲ್ಲಿ ಯುವಜನರು’ ಎಂಬ ಶೀರ್ಷಿಕೆಯಲ್ಲಿ ಸಬ್‌ಕಾ ಸಾತ್ ಸಬ್‌ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಸಬ್‌ಕಾ ಪ್ರಯಾಸ್’ ಕುರಿತ ಭಾಷಣ ಸ್ಪರ್ಧೆಯನ್ನು ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಆಯೋಜಿಸಲು ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ನಿರ್ಧರಿಸಿದೆ.
ಮಡಿಕೇರಿ ತಾಲ್ಲೂಕಿಗೆ ಸಂಬAಧಿಸಿದAತೆ ಆಯ್ಕೆ ಪ್ರಕ್ರಿಯೆಯು ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆಯಲಿದೆ.
ಹಾಗೆಯೇ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿಗೆ ಸಂಬAಧಿಸಿದAತೆ ಆಯ್ಕೆ ಪ್ರಕ್ರಿಯೆಯು ತಾ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ನಡೆಯಲಿದೆ.
ರಾಜ್ಯ ಮತ್ತು ರಾಷ್ಟçಮಟ್ಟದ ವಿಜೇತರುಗಳಿಗೆ ಆಕರ್ಷಕ ಬಹುಮಾನ ನೀಡಲಿದ್ದು, ಜಿಲ್ಲಾಮಟ್ಟ ಪ್ರಥಮ ರೂ. ೫ ಸಾವಿರ, ದ್ವಿತೀಯ ರೂ. ೨ ಸಾವಿರ ಮತ್ತು ತೃತೀಯ ರೂ. ೧ ಸಾವಿರ, ರಾಜ್ಯಮಟ್ಟದಲ್ಲಿ ಪ್ರಥಮ ರೂ. ೨೫ ಸಾವಿರ, ದ್ವಿತೀಯ ರೂ. ೧೦ ಸಾವಿರ ಮತ್ತು ತೃತೀಯ ರೂ. ೫ ಸಾವಿರ ಹಾಗೂ ರಾಷ್ಟçಮಟ್ಟದಲ್ಲಿ ಪ್ರಥಮ ರೂ. ೨ ಲಕ್ಷ, ದ್ವಿತೀಯ ರೂ. ೧ ಲಕ್ಷ ಮತ್ತು ತೃತೀಯ ರೂ. ೫೦ ಸಾವಿರ ಬಹುಮಾನ ನೀಡಲಾಗುತ್ತದೆ.
ಆಯ್ಕೆಗೊಂಡ ಪ್ರತಿ ಮೂರು ಯುವ ಜನರು ಜಿಲ್ಲಾ ಮಟ್ಟದಲ್ಲಿ ಜರುಗುವ ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದೆ. ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಯ್ಕೆಯಾದ ವರು, ರಾಜ್ಯಮಟ್ಟದ ಸ್ಪರ್ಧೆಗೆ ಭಾಗವಹಿಸಬಹುದಾಗಿದೆ. ರಾಜ್ಯಮಟ್ಟ ದಲ್ಲಿ ಭಾಗವಹಿಸಿ ಆಯ್ಕೆಯಾದವರು ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ಆಯಾಯ ತಾಲೂಕಿನ ಆಸಕ್ತ ೧೮-೨೯ ವಯೋಮಿತಿಯ ಯುವಜನರು, ಸ್ಪರ್ಧಿಗಳು ಕಡ್ಡಾಯವಾಗಿ ಕೊಡಗು ಜಿಲ್ಲೆಯ ನಿವಾಸಿಗಳಾಗಿರಬೇಕು. ಅಥವಾ ಕಳೆದ ೫ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ವಾಸವಿರಬೇಕು. ೨೦೧೬ ರಿಂದ ೨೦೧೯ರ ತನಕ ಜಿಲ್ಲಾ ಮಟ್ಟದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡವರು ಈ ಬಾರಿ ಸ್ಪರ್ಧಿಸುವಂತಿಲ್ಲ.
ಹೆಚ್ಚಿನ ಮಾಹಿತಿಗೆ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎನ್‌ಎಸ್ ಅಧಿಕಾರಿ ನಿರ್ಮಲ ಮೊ.ನಂ. ೯೪೪೯೯೪೬೧೪೨ ನ್ನು ಹಾಗೂ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಕಾರ್ಯಕ್ರಮ ಅಧಿಕಾರಿ ವನಿತ್ ಮೊ. ೯೮೮೦೫೦೪೨೦೮ ಹಾಗೂ ನೆಹರು ಯುವ ಕೇಂದ್ರ ಕಚೇರಿ, ಮಡಿಕೇರಿ ದೂ ೦೮೨೭೨-೨೨೫೪೭೦ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಎಸ್. ಸಿದ್ದರಾಮಪ್ಪ ತಿಳಿಸಿದ್ದಾರೆ.