ನಾಪೋಕ್ಲು, ನ. ೬ : ನ. ೨೦ರ ಶನಿವಾರದಂದು ಕೊಡಗಿನಲ್ಲಿ ಹುತ್ತರಿ ಹಬ್ಬ (ಪುತ್ತರಿ ನಮ್ಮೆ) ನಡೆಯಲಿದೆ. ಕೊಡಗಿನ ಪ್ರಸಿದ್ಧ ಕ್ಷೇತ್ರ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಕಲಾಡ್ಚ ಹಬ್ಬ, ಹುತ್ತರಿ ಹಬ್ಬದ ಶುಭ ದಿನ, ಶುಭ ಘಳಿಗೆಯನ್ನು ದೇವಳದಲ್ಲಿ ನಿನ್ನೆ ದಿನ ನಡೆದ ಜೋತಿಷ್ಯ ಪ್ರಶ್ನೆಯಲ್ಲಿ ದೇವಳದ ಪಾರಂಪರಿಕ ಜೋತಿಷ್ಯರಾದ ಅಮ್ಮಂಗೇರಿ ಕಣಿಯರ ಶಶಿಕುಮಾರ್ ನಿಗದಿಪಡಿಸಿದರು.
ಅದರಂತೆ ನ. ೧೯ರ ಶುಕ್ರವಾರ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಹುತ್ತರಿ ಕಲಾಡ್ಚ ಹಬ್ಬ ನ.೨೦ರ ಶನಿವಾರ ರಾತ್ರಿ ೭.೦೫ ಗಂಟೆಗೆ ದೇವಳದಲ್ಲಿ (ದೇವ ಪೋದ್) ನೆರೆ ಕಟ್ಟುವದು, ೮.೦೫ ಗಂಟೆಗೆ ಕದಿರು ತೆಗೆಯುವದು ಮತ್ತು ೯.೦೫ ಗಂಟೆಗೆ ಪ್ರಸಾದ ಭೋಜನಕ್ಕೆ ಪ್ರಶಸ್ತ ಸಮಯ ವೆಂದು ನಿಗದಿ ಪಡಿಸಲಾಗಿದೆ.
ಸಾರ್ವಜನಿಕರಿಗೆ (ನಾಡ್ ಪೋದ್) ನ.೨೦ ರಂದು ರೋಹಿಣಿ ನಕ್ಷತ್ರ, ಮಿಥುನ ಲಗ್ನದಲ್ಲಿ ರಾತ್ರಿ ೭.೩೫ ಗಂಟೆಗೆ ನೆರೆ ಕಟ್ಟುವದು, ೮.೩೫ ಗಂಟೆಗೆ ಕದಿರು ತೆಗೆಯುವದು ಮತ್ತು ೯.೩೫ ಗಂಟೆಗೆ ಭೋಜನಕ್ಕೆ ವೇಳೆ ನಿಗದಿಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದೇವತಕ್ಕರಾದ ಪರದಂಡ ಡಾಲಿ, ಹುತ್ತರಿ ಹಬ್ಬದ ಪ್ರಯುಕ್ತ ನ. ೫ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮದಲ್ಲಿ ತಕ್ಕ ಮುಖ್ಯಸ್ಥ ರೊಂದಿಗೆ ಸೇರಿ ದೇಶ ಕಟ್ಟು ವಿಧಿಸಲಾಗಿದೆ. ಇದು ನ. ೧೯ರಂದು ದೇವಳದಲ್ಲಿ ಕಲಾಡ್ಚ ಹಬ್ಬ ನಡೆದು ಎತ್ತೇರಾಟ, ದುಡಿಕೊಟ್ಟ್ಪಾಟ್ ಮತ್ತು ದೇವರ ಮೂರ್ತಿಯೊಂದಿಗೆ ಆದಿ ಸ್ಥಳ ಮಲ್ಮಕ್ಕೆ ತೆರಳಿ ಸಂಪ್ರದಾಯದAತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಕಟ್ಟು ಸಡಿಲಿಸಲಾಗುವದು. ಈ ಸಮಯದಲ್ಲಿ ಹಸಿರು ಮರ ಕಡಿಯುವದು, ರಕ್ತಪಾತ, ಪ್ರಾಣಿ ಹಿಂಸೆ, ಮಧು ಮಾಂಸ ಸೇವನೆ, ಸಭೆ ಸಮಾರಂಭಗಳನ್ನು ನಡೆಸುವದನ್ನು ನಿಷೇಧಿಸಲಾಗಿದೆ. ಎಲ್ಲಾ ಭಕ್ತ ಬಾಂಧವರು ಶ್ರೀ ದೇವರ ಕಟ್ಟು ಕಟ್ಟಳೆಗಳನ್ನು ಸರಿಯಾಗಿ ಪಾಲಿಸಬೇಕೆಂದು ಮನವಿ ಮಾಡಿದರು. ಕಲಾಡ್ಚ ಹಬ್ಬಕ್ಕೆ ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸುವಂತೆ ಸಲಹೆ ನೀಡಿದರು.
ಈ ಸಂರ್ಭದಲ್ಲಿ ಭಕ್ತಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಖಜಾಂಚಿ ನಂಬಡಮAಡ ಸುಬ್ರಮಣಿ, ತಕ್ಕ ಮುಖ್ಯಸ್ಥರಾದ ಪರದಂಡ ವಿಠಲ, ಸದಾ ನಾಣಯ್ಯ, ನಂಬಡಮAಡ ಶಂಭು ನಂಜಪ್ಪ, ಕೇಟೋಳಿರ ಕುಟ್ಟಪ್ಪ, ಕೇಟೋಳಿರ ಶಮ್ಮಿ, ಬಾಚಮಂಡ ಲವ ಚಿಣ್ಣಪ್ಪ, ಕುಟ್ಟಂಜೆಟ್ಟಿರ ಶ್ಯಾಮ್, ಕೇಟೋಳಿರ ಗಪ್ಪು ಗಣಪತಿ, ಉದಿಯಂಡ ಕುಟ್ಟಪ್ಪ, ಪಾಂಡAಡ ನರೇಶ್, ಕಣಿಯರ ನಾಣಯ್ಯ, ಹರೀಶ್, ಪಾರುಪತ್ತೆಗಾರ ಪರದಂಡ ತಮ್ಮಪ್ಪ ಸೇರಿದಂತೆ ಸಂಬAಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾದಿಗಳು ಇದ್ದರು.
- ಪಿ.ವಿ.ಪ್ರಭಾಕರ್