ಮಡಿಕೇರಿ, ನ. ೭: ತಾಲೂಕಿನ ಬೆಟ್ಟಗೇರಿ ನಿವಾಸಿ ಮಂಜೇಶ್ ಅವರ ಪತ್ನಿ ಹಾಗೂ ಮದೆನಾಡು ಗ್ರಾಮದ ಮುತ್ತಪ್ಪ ಹಾಗೂ ಗಿರಿಜ ದಂಪತಿಗಳ ಪುತ್ರಿ ತಶ್ಮ, ಕುಶಾಲನಗರ ಸಮೀಪದ ನಂಜರಾಯಪಟ್ಟಣದ ವಾಸು ಸಿ.ಎಂ. ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ ನಂದಿನಿ ಸಿ.ವಿ. ಇವರುಗಳು ಭಾಗವಹಿಸಿದ್ದ ಕರ್ನಾಟಕ ಥ್ರೋಬಾಲ್ ತಂಡ ಹರಿಯಾಣದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸೆಮಿಫೈನಲ್ಸ್ನಲ್ಲಿ ಜಾರ್ಖಂಡ್ ತಂಡವನ್ನು ೮-೨೫, ೯-೨೫ ಅಂಕಗಳ ಅಂತರದಿAದ ಪಂದ್ಯವನ್ನು ತನ್ನದಾಗಿಸಿಕೊಂಡು ಕರ್ನಾಟಕ ತಂಡ ಫೈನಲ್ ರೌಂಡ್ ತಲುಪಿತ್ತು. ಹರಿಯಾಣದ ಎ.ಡಿ.ವಿ.ವಿಯಲ್ಲಿ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡದ ವಿರುದ್ಧ ೨೧-೨೫, ೨೧-೨೫ ಅಂಕಗಳನ್ನು ಗಳಿಸುವ ಮೂಲಕ ಕೂದಲೆಳೆ ಅಂತರದಿAದ ಹರಿಯಾಣ ತಂಡವು ಪಂದ್ಯಾವಳಿಯ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೊಡಗಿನ ಈ ಇರ್ವರು ಯುವತಿಯರು ಈ ಮೂಲಕ ಕೊಡಗಿನ ಕ್ರೀಡಾ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಿರುತ್ತಾರೆ. - ರಂಜಿತ್ ಕವಲಪಾರ