ಬಾಳೆಲೆ, ನ. ೬: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೂರು ಗ್ರಾಮದ ಕುಂಬಾರಕಟ್ಟೆ ಗಿರಿಜನ ಹಾಡಿಯ ಶಾಲಾ ವಿದ್ಯಾರ್ಥಿಗಳು ೮ ಕಿಮೀ ದೂರದಲ್ಲಿರುವ ಬಾಳೆಲೆ ಮಾದರಿ ಪ್ರಾಥಮಿಕ ಶಾಲೆಗೆ ಹೋಗಿ ಬರಲು ಬೆಳಿಗ್ಗೆ ಮತ್ತು ಸಂಜೆ ಒಟ್ಟು ೧೬ ಕಿಮೀ ಕಾಲ್ನಡಿಗೆಯಲ್ಲಿ ತೆರಳಬೇಕಾಗಿದೆ. ಕುಂಬಾರಕಟ್ಟೆ ಹಾಡಿಯು ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿದ್ದು ಈ ಭಾಗದಲ್ಲಿ ಆನೆ, ಹುಲಿ, ಕರಡಿಗಳ ಹಾವಳಿ ಹೆಚ್ಚಿದೆ. ಈ ಭಾಗಕ್ಕೆ ಯಾವುದೇ ಬಸ್ ಸಂಪರ್ಕ ಇಲ್ಲದಿರುವುದರಿಂದ ಶಾಲಾ ಮಕ್ಕಳ ಹಿತ ದೃಷ್ಟಿಯಿಂದ ಶಿಕ್ಷಣ ಇಲಾಖೆ ಮೂಲಕ ಸಾರಿಗೆ ಭತ್ಯೆ ಅಥವಾ ಅರಣ್ಯ ಇಲಾಖೆ ವತಿಯಿಂದ ವಾಹನÀ ವ್ಯವಸ್ಥೆ ಕಲ್ಪಿಸುವಂತೆ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಅವರ ನೇತೃತ್ವದಲ್ಲಿ ವೀರಾಜಪೇಟೆ ಶಾಸಕರ ಕಚೆರಿಯಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ ನವರಿಗೆ ಮನವಿ ಸಲ್ಲಿಸಲಾಯಿತು. ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿಯವರನ್ನು ಮೊಬೈಲ್ ಮೂಲಕ ಸಂಪರ್ಕ ಮಾಡಿ ಸ್ಥಳ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನೆರವನ್ನು ಶಿಕ್ಷಣ ಇಲಾಖೆ ಮೂಲಕ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದAತೆ ಕ್ರಮವಹಿಸಲು ಸೂಚನೆ ನೀಡಿದರು ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ ಉಪಾಧ್ಯಕ್ಷೆ ಪಡಿಞರಂಡ ಕವಿತಾಪ್ರಭು ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.