ಮಡಿಕೇರಿ, ನ. ೬: ಚುನಾವಣೆ ಬಂದಾಗ ಗೆಲುವು ಸಾಧಿಸುವ ಸಲುವಾಗಿ ಅನೇಕರು ಅದೆಷ್ಟೋ ಥರ ಥರ ಭÀರವಸೆಗಳನ್ನು ನೀಡುತ್ತಾರೆ. ಆದರೆ ಗೆದ್ದ ನಂತರ ಕೆಲಸ ಮಾಡಲು ಮಾತ್ರ ಒಂಥರಾ ಆಡುತ್ತಾರೆ., ಇದಕ್ಕೆ ವಿರುದ್ಧವೆಂಬAತೆ ಯಾವದೇ ಅಧಿಕಾರವಿಲ್ಲದಿದ್ದರೂ ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅರುಣ್ ಶೆಟ್ಟಿ ಇದೀಗ ಅಧಿಕಾರ ಸಿಕ್ಕ ಬಳಿಕ ತಮ್ಮ ಸ್ವಇಚ್ಛೆಯಿಂದ ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮಡಿಕೇರಿ ನಗರಸಭೆ ವಾರ್ಡ್ ಸಂಖ್ಯೆ ೧೭ರ ಸದಸ್ಯರಾಗಿ ಆಯ್ಕೆಯಾಗಿರುವ ಅರುಣ್ ಶೆಟ್ಟಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮುನ್ನವೇ ಚರಂಡಿ, ರಸ್ತೆ ದುರಸ್ತಿ, ಕಸ, ತ್ಯಾಜ್ಯ ನಿರ್ವಹಣೆ, ಕೋವಿಡ್ ಲಸಿಕೆ ನೀಡುವಿಕೆ ಸೇರಿದಂತೆ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇದೀಗ ತಾ. ೭ ರಂದು (ಇಂದು) ವಾರ್ಡ್ನಲ್ಲಿರುವ ಶ್ರೀ ವಿಜಯ ವಿನಾಯಕ ದೇವಾಲಯದ ವಾರ್ಷಿಕೋತ್ಸವ ಜರುಗಲಿರುವದರಿಂದ ವಾಹನಗಳ ಸುಗಮ ಸಂಚಾರ ಹಾಗೂ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಮಾಡಿಸಿದ್ದಾರೆ. ದಾನಿಗಳು ನೀಡಿದ ಜೆಸಿಬಿ ಮೂಲಕ ತಮ್ಮ ಸ್ವಂತ ಖರ್ಚಿನಿಂದ ರಸ್ತೆ ಅಗಲೀಕರಣ ಮಾಡಿಸಿದ್ದಾರೆ. ವಾರ್ಷಿಕೋತ್ಸವ ಸಂದರ್ಭ ಜನತೆ ವಾಹನ ದಟ್ಟಣೆ ಆಗದಂತೆ ಸಹಕರಿಸುವದರೊಂದಿಗೆ ಶುಚಿತ್ವ ಕಾಪಾಡುವಂತೆ ಅರುಣ್ ಶೆಟ್ಟಿ ಮನವಿ ಮಾಡಿದ್ದಾರೆ.