ಗೋಣಿಕೊಪ್ಪ ವರದಿ, ನ. ೬ : ಪೊನ್ನಂಪೇಟೆ ಜೆಸಿಐ ಗೋಲ್ಡನ್ ವತಿಯಿಂದ ಬೆಸಗೂರು ಗ್ರಾಮದಲ್ಲಿ ಆಯೋಜಿಸಿದ್ದ ನಿಧಿ ಶೋಧನಾ ರ‍್ಯಾಲಿ ರೋಚಕತೆ ಮೂಡಿಸಿತು. ದಾರಿ ಹುಡುಕುವುದು, ವೇಗದೊಂದಿಗೆ ಸಮಯ ಪಾಲನೆ, ನಿಧಿ ಪತ್ತೆ, ಗುರಿ ಸಾಧನೆಯಲ್ಲಿ ಸ್ಪರ್ಧಿಗಳು ಚಾಕಚಕ್ಯತೆ ತೋರಿದರು.

ಬೆಸಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಆರಂಭಗೊAಡ ರ‍್ಯಾಲಿಯಲ್ಲಿ ಮಳೆ, ಹಸಿರು ದಾರಿಯ ನಡುವೆ ಜೀಪುಗಳ ಓಡಾಟ.. ಸೆಲ್ಫಿ ಚಿತ್ರದೊಂದಿಗೆ ಗುರಿ ತಲುಪುವ ಧಾವಂತ ಕಂಡು ಬಂತು. ಸ್ಪರ್ಧಿಗಳಿಗೆ ದಾರಿಯ ಮ್ಯಾಪ್, ಚಿತ್ರಿಕರಿಸಬೇಕಾದ ಚಿತ್ರ, ವೇಗ ನಿಯಂತ್ರಣಕ್ಕೆ ವಿಶೇಷ ಟಾಸ್ಕ್ ನೀಡಲಾಗಿತ್ತು. ಡಿ.ಐ, ಎಂ.ಡಿಐ, ಪಿಕ್ ಅಪ್, ಕಮಾಂಡರ್, ಜಿಪ್ಸಿ, ಮೇಜರ್, ತಾರ್ ವಾಹನಗಳನ್ನು ಸ್ಪರ್ಧೆಗೆ ಬಳಕೆ ಮಾಡಲಾಗಿತ್ತು. ಸಮಯ, ವೇಗ, ಸ್ಕಿಲ್, ಗುರಿ ಎಂಬ ನಿಯಮದಡಿ ಸ್ಪರ್ಧೆ ನಡೆಯಿತು.

ಬೆಸಗೂರು, ಬಿಳೂರು, ಪೊನ್ನಪ್ಪಸಂತೆ, ನಲ್ಲೂರು ಗ್ರಾಮಗಳ ಸುಮಾರು ೧೭.೦೨ ಕಿ. ಮೀ. ರಸ್ತೆಯಲ್ಲಿ ಸಾಗುವಂತೆ ಅವಕಾಶ ಮಾಡಿಕೊಡಲಾಗಿತ್ತು. ಶೋಧನಕ್ಕೆ ಬೇಕಾದ ಲ್ಯಾಂಡ್‌ಮಾರ್ಕ್ಗಳ ಪತ್ತೆಗೆ ದಾರಿಯುದ್ದಕ್ಕೂ ಕಾಣಸಿಗುವ ದಾರಿ, ತೋಟ, ದೇವಸ್ಥಾನ, ಗೇಟ್, ಮೈಲಿಗಲ್ಲು ಪತ್ತೆ ಹಚ್ಚುವಂತೆ ಯೋಜನೆ ರೂಪಿಸಲಾಗಿತ್ತು. ಕಣಜ ಗೂಡನ್ನು ಪತ್ತೆಹಚ್ಚಿ ಫೋಟೋ ಚಿತ್ರೀಕರಿಸಲು ಕೂಡ ನಿಯಮ ರೂಪಿಸಲಾಗಿತ್ತು. ಪ್ರತೀ ಸ್ಪರ್ಧಿಗೆ ೮ ಬಗೆಯ ಟಾಸ್ಕ್ ನೀಡಲಾಗಿತ್ತು. ದಾರಿ ಮದ್ಯೆ ಸಿಗುವ ಆಯೋಜಕರು ಚಿತ್ತೀಕರಿಸಿ ನೀಡಿರುವ ಫೋಟೋದಂತೆ ಸ್ಪರ್ಧಿಗಳು ಚಿತ್ರ ತೆಗೆಯಬೇಕಿತ್ತು. ಇದಕ್ಕೆ ಒಂದಷ್ಟು ಪ್ರಮುಖ ರಸ್ತೆ, ಮೈಲಿಗಲ್ಲು, ಬಿದ್ದಿರುವ ಮರದೊಂದಿಗೆ ಸೆಲ್ಪೀ, ದೇವಸ್ಥಾನ ಎದುರು, ಭತ್ತದ ಗದ್ದೆ ಹೀಗೆ ಒಂದಷ್ಟು ವಸ್ತುಗಳೊಂದಿಗೆ ಚಿತ್ರ ತೆಗೆಯಲು ಪ್ರತ್ಯೇಕವಾಗಿ ನೀಡಿದ್ದ ಟಾಸ್ಕ್ನಲ್ಲಿ ಸ್ಪರ್ಧೆಗಳು ಚಾಕಚಕ್ಯತೆ ತೋರಿದರು. ಆಯೋಜಕರು ನೀಡಿರುವ ಚಿತ್ರಕ್ಕೆ ಸರಿ ಸಮನಾಗಿ ಚಿತ್ರ ತೆಗೆದವರಿಗೆ ಅಂಕ ನೀಡಲಾಯಿತು.

ವಿಜೇತರು : ತೀತೀರ ಶಾನ್ ನಾಣಯ್ಯ- ಮೇಚಂಡ ಪವಿ ಪೆಮ್ಮಯ್ಯ ಜೋಡಿ ಪ್ರಥಮ ಸ್ಥಾನ, ತೀತೀರ. ಎ. ಪೊನ್ನಣ್ಣ- ಪುಳ್ಳಂಗಡ ಟಿ ಸುಬ್ಬಯ್ಯ ಜೋಡಿ ದ್ವಿತೀಯ, ಪೊನ್ನಿಮಾಡ. ಬಿ. ಡಯಾನಾ - ಬಾಚಮಾಡ. ಎಸ್. ದೀಕ್ಷಿತ್ ನಂಜಪ್ಪ ಜೋಡಿ ತೃತಿಯ ಸ್ಥಾನ ಪಡೆದುಕೊಂಡರು. ೨೦ ಜೋಡಿ ಸ್ಪರ್ಧಿಸಿದ್ದರು. ಮಹಿಳೆ ಕೂಡ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡರು.

ಉದ್ಯಮಿ ನೆಲ್ಲೀರ ಚಲನ್ ರ‍್ಯಾಲಿ ಉದ್ಘಾಟಿಸಿ ಮಾತನಾಡಿದರು.

ಪೊನ್ನಂಪೇಟೆ ಜೆಸಿಐ ಗೋಲ್ಡನ್ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ, ಕಾರ್ಯಕ್ರಮ ನಿರ್ದೇಶಕ ಮತ್ರಂಡ ಬೋಪಣ್ಣ, ನಿಕಟಪೂರ್ವ ಅಧ್ಯಕ್ಷ ಗಯಾ ಜೋಯಪ್ಪ, ಅಂತರಾಷ್ಟಿçÃಯ ಹಾಕಿ ಆಟಗಾರ ಪುಳ್ಳಂಗಡ ಬೋಪಣ್ಣ, ಪ್ರಮುಖರಾದ ಪುಳ್ಳಂಗಡ ನಟೇಶ್, ಕೊಟ್ಟಂಗಡ ಸುಬ್ಬಯ್ಯ ಇದ್ದರು.