ಹೊದ್ದೂರು, ನ. ೬: ರಾಷ್ಟಿç್ಟÃಯ ವೀಲ್‌ಛೇರ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಹೊದ್ದೂರಿನ ಲೋಹಿತ್ ಗೌಡ ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿಯು ಗುಜರಾತಿನ ವಡೋದರದಲ್ಲಿ ತಾ.೯ರಿಂದ ೧೪ರವರೆಗೆ ನಡೆಯಲಿದೆ. ಈ ಪಂದ್ಯಾಟದಲ್ಲಿ ವಿವಿಧ ವಲಯಗಳ ೮ ತಂಡಗಳು ಭಾಗವಹಿಸಲಿವೆ. ಲೋಹಿತ್ ಕರ್ನಾಟಕದಿಂದ ಪಂದ್ಯಾಟಕ್ಕೆ ಆಯ್ಕೆಯಾಗಿರುವ ಏಕೈಕ ಆಟಗಾರ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ವೀಲ್ ಛೇರ್ ಪಂದ್ಯಾವಳಿಯಲ್ಲಿ ಲೋಹಿತ್ ಗೌಡ “ಶ್ರೇಷ್ಠ ಬ್ಯಾಟ್ಸ್ಮನ್” ಪ್ರಶಸ್ತಿಗೆ ಭಾಜನರಾಗಿದ್ದರು.