*ಗೋಣಿಕೊಪ್ಪಲು, ನ. ೬: ತಿತಿಮತಿ ಗ್ರಾಮ ಪಂಚಾಯಿತಿ ವಾರ್ಡ್ ಸಭೆಯೂ ಈ ಕೆಳಕಂಡ ದಿನಾಂಕದAದು ನಡೆಯಲಿದೆ. ೧ನೇ ವಾರ್ಡ್ನ ಸಭೆ ತಾ. ೯ ರಂದು ಬೆಳಿಗ್ಗೆ ೧೦.೩೦ಕ್ಕೆ ನೊಕ್ಯ ತಿತಿಮತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ೨ನೇ ವಾರ್ಡ್ ಸಭೆ ತಾ. ೧೦ ರಂದು ಬೆಳಿಗ್ಗೆ ೧೦.೩೦ಕ್ಕೆ ಕರಡಿಕೊಪ್ಪ ಅಂಗನವಾಡಿಯಲ್ಲಿ, ೩ನೇ ವಾರ್ಡ್ ಸಭೆ ತಾ. ೮ ರಂದು ಮಧ್ಯಾಹ್ನ ೨.೩೦ಕ್ಕೆ ಮರೂರು ಆಶ್ರಮ ಶಾಲೆಯಲ್ಲಿ, ೪ನೇ ವಾರ್ಡ್ ಸಭೆ ತಾ. ೯ ಮಧ್ಯಾಹ್ನ ೨.೩೦.ಕ್ಕೆ ದೇವಮಚ್ಚಿ ಅಂಗನವಾಡಿಯಲ್ಲಿ ೫ನೇ ವಾರ್ಡ್ ಸಭೆ ತಾ. ೮ ರಂದು ಬೆಳಿಗ್ಗೆ ೧೦.೩೦ಕ್ಕೆ ರೇಷ್ಮೆಹಡ್ಲು ಸುಮುದಾಯ ಭವನದಲ್ಲಿ ನಡೆಯಲಿದೆ.
ತಿತಿಮತಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ತಾ. ೧೫ ರಂದು ಅಧ್ಯಕ್ಷೆ ಎಚ್.ಕೆ. ಆಶಾ ಅವರ ಅಧ್ಯಕ್ಷತೆಯಲ್ಲಿ ಸಮುದಾಯ ಭವನದಲ್ಲಿ ನಡೆಯಲಿದೆ. ನೋಡಲ್ ಅಧಿಕಾರಿಯಾಗಿ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಚೆಲುವರಾಜು ಆಗಮಿಸಲಿದ್ದಾರೆ ಎಂದು ಪಿಡಿಓ ಮಮತಾ ತಿಳಿಸಿದ್ದಾರೆ.