ಸೋಮವಾರಪೇಟೆ,ನ.೬: ಸಮೀಪದ ಚೌಡ್ಲು ಗ್ರಾಮದ ಸಾಂದೀಪನಿ ಶಾಲೆಯ ಸಮೀಪ ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಅರೆಭಾಷೆ ಗೌಡ ಸಮಾಜದ ಕಟ್ಟಡ ನಿರ್ಮಾಣಕ್ಕೆ, ಜಾಗದ ದಾನಿಗಳಾದ ಮೂಡಗದ್ದೆ ದಾಮೋದರ್ ಹಾಗೂ ಲಿಖಿತ್ ದಾಮೋದರ್ ಅವರುಗಳು ಭೂಮಿ ಪೂಜೆ ನೆರವೇರಿಸಿದರು.
ಸಂಘದ ಅಧ್ಯಕ್ಷ ದಂಡಿನ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಅರೆಭಾಷೆ ಗೌಡ ಸಮಾಜದ ಕಾರ್ಯ ಚಟುವಟಿಕೆಗಳಿಗೆ ಕಟ್ಟಡದ ಅವಶ್ಯಕತೆಯಿರುವುದರಿಂದ, ತಮ್ಮ ಶಾಲೆಗೆ ಒಳಪಟ್ಟ ಜಾಗವನ್ನು ಸಮಾಜಕ್ಕೆ ಉದಾರವಾಗಿ ನೀಡಿದ ಮೂಡಗದ್ದೆ ದಾಮೋದರ್ ಹಾಗೂ ಪತ್ನಿ ಹರಿಣಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಆಸ್ಪತ್ರೆಯ ಮಕ್ಕಳ ತಜ್ಞ ಮೇ. ಡಾ. ಕುಶ್ವಂತ್ ಕೋಳಿಬೈಲ್, ಬೆಂಗಳೂರು ಮಹಾ ನಗರ ಪಾಲಿಕೆಯ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ, ಸಮಾಜದ ಉಪಾಧ್ಯಕ್ಷ ಮುಕ್ಕಾಟಿ ಚಂಗಪ್ಪ, ಕಾರ್ಯದರ್ಶಿ ನಂಗಾರು ವಸಂತ್, ಖಜಾಂಚಿ ಕುದುಕುಳಿ ಗಜೇಂದ್ರ ಸೇರಿದಂತೆ ಇತರರು ಇದ್ದರು.