ನಾಪೋಕ್ಲು, ನ. ೪: ಕಕ್ಕಬ್ಬೆಯ ಟ್ರೆöÊಯಾಂಗಲ್ ಶೂರ‍್ಸ್ ವತಿಯಿಂದ ಏರ್ಪಡಿಸಲಾಗಿದ್ದ ತೆಂಗಿನಕಾಯಿಗೆ ಗುಂಡುಹೊಡೆಯುವ .೨೨ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಸ್ಥಾನ ಗಳಿಸಿದ ಜಸ್ಟಿನ್ ಡಾ. ಬೊವ್ವೇರಿಯಂಡ ಉತ್ತಯ್ಯ ಪ್ರಾಯೋಜಿಸಿದ ಟ್ರೋಫಿ ಹಾಗೂ ನಗದು ಬಹುಮಾನವನ್ನು ಗಳಿಸಿದರು. ದ್ವಿತೀಯ ಸ್ಥಾನ ಪಡೆದ ಮಾರ್ಚಂಡ ಕಾಂಚನ್ ಅವರಿಗೆ ಕಾಂಡAಡ ಉಮೇಶ್ ಅವರು ತಂದೆ-ತಾಯಿಯ ಹೆಸರಿನಲ್ಲಿ ಪ್ರಾಯೋಜಿಸಿದ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಲಾಯಿತು. ತೃತೀಯ ಸ್ಥಾನ ಪಡೆದ ಕೂಪದೀರ ಪ್ರಖ್ಯಾತ್ ಚಿಣ್ಣಪ್ಪ ಅವರಿಗೆ ಗ್ರಾ.ಪಂ. ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಪ್ರಾಯೋಜಿಸಿದ ಟ್ರೋಫಿ ಹಾಗೂ ನಗದು ವಿತರಿಸಲಾಯಿತು.

೧೨ ಬೋರ್ ವಿಭಾಗದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮದ್ರೀರ ಗಣಪತಿ, ಕಾಣತ್ತಂಡ ಶಬರೀಶ್, ಹಾಗೂ ಚೀಯಕಪೂವಂಡ ಸುಜ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಪ್ರಥಮ ಸ್ಥಾನ ವಿಜೇತರಿಗೆ ಬಾಚಮಂಡ ಅಪ್ಪಚ್ಚು ತಮ್ಮ ಪತ್ನಿ ಜಾಜಿ ಹೆಸರಿನಲ್ಲಿ ಪ್ರಾಯೋಜಿಸಿದ ಟ್ರೋಫಿ ಹಾಗೂ ನಗದು ಬಹುಮಾನವನ್ನು, ದ್ವಿತೀಯ ಸ್ಥಾನ ವಿಜೇತರಿಗೆ ಬಾಚಮಂಡ ಅಪ್ಪಣ್ಣ ಹಾಗೂ ತೃತೀಯ ಸ್ಥಾನ ವಿಜೇತರಿಗೆ ಬಾಚಮಂಡ ಕಸ್ತೂರಿ ಪ್ರಾಯೋಜಿಸಿದ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.

ಏರ್ ರೈಫಲ್ ಟಾರ್ಗೆಟ್ ಶೂಟಿಂಗ್‌ನಲ್ಲಿ ಪುತ್ತರಿರ ನಂಜಪ್ಪ ಪ್ರಥಮ ಸ್ಥಾನವನ್ನು, ಬಡುವಂಡ ದೇವಯ್ಯ ದ್ವಿತೀಯ ಸ್ಥಾನವನ್ನು, ಚೀಯಕಪೂವಂಡ ಜೀವನ್ ತೃತೀಯ ಸ್ಥಾನವನ್ನು ಗಳಿಸಿ ಟ್ರೋಫಿ ಹಾಗೂ ನಗದು ಪ್ರಶಸ್ತಿ ಸ್ವೀಕರಿಸಿದರು.

ಕಕ್ಕಬ್ಬೆಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೈಲ್‌ಪೊಳ್ದ್ ಕ್ರೀಡೆ ಅಂಗವಾಗಿ ಟ್ರೆöÊಯಾಂಗಲ್ ಶೂರ‍್ಸ್ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಬಾಚಮಂಡ ಕಸ್ತೂರಿ ಪೂವಪ್ಪ ಕೋವಿ ಪೂಜೆ ನೆರವೇರಿಸಿ ದಾನಿಗಳಾದ ಡಾ. ಬೊವ್ವೇರಿಯಂಡ ಉತ್ತಯ್ಯ, ದೀಪ ಬೆಳಗಿಸಿ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಟ್ರೋಫಿ ದಾನಿಗಳಾದ ಕಲಿಯಂಡ ಸಂಪನ್ ಅಯ್ಯಪ್ಪ, ಬಾಚಮಂಡ ಅಪ್ಪಚ್ಚು, ಕಾಂಡAಡ ಉಮೇಶ್, ಇಟ್ಟಿರಾ ಯೋಗೇಶ್, ಕಲಿಯಂಡ ಭರತ್ ಟ್ರೆöÊಯಾಂಗಲ್ ಶೂರ‍್ಸ್ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯ ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು.