ಸುಂಟಿಕೊಪ್ಪ, ನ. ೪: ದೀಪಾವಳಿ ಹಬ್ಬದಂದು ರಸಾಯನಿಕಯುಕ್ತ ಪಟಾಕಿಗಳನ್ನು ಸಿಡಿಸದೆ ಹಸಿರು ದೀಪಾವಳಿಯನ್ನು ಆಚರಿಸಿ ಪರಿಸರ ಉಳಿಸುವಂತೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಸಿರು ದೀಪಾವಳಿಯ ಬಗ್ಗೆ ಮಾಹಿತಿ ಹಾಗೂ ಪ್ರತಿಜ್ಞಾ ವಿಧಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಪಟಾಕಿ ಸಿಡಿಸುವುದರಿಂದ ಅನೇಕ ಮಂದಿಯ ಕಣ್ಣು, ಕೈ ಹಾಗೂ ದೇಹದ ಭಾಗಗಳಿಗೆ ಬೆಂಕಿ ತಗುಲಿದ ಘಟನೆ ಇಂದಿಗೂ ಘಟಿಸುತ್ತಿದ್ದು ವಿದ್ಯಾರ್ಥಿಗಳು ರಸಾಯನಿಕಯುಕ್ತ ಪಟಾಕಿಗಳನ್ನು ತ್ಯಜಿಸಿ ದೀಪವನ್ನು ಹಚ್ಚಿ ದೀಪಾವಳಿ ಆಚರಿಸೋಣ ಎಂದರು.

ಪ್ರತಿಜ್ಞಾವಿಧಿಯನ್ನು ಉಪನ್ಯಾಸಕ ಹೆಚ್.ಎಸ್. ಈಶ, ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್ ವಹಿಸಿದ್ದರು.