*ಗೋಣಿಕೊಪ್ಪ, ನ. ೪: ಗೋಣಿಕೊಪ್ಪ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಈ ಸಂದರ್ಭ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಕುಲ್ಲಚಂಡ ಬೋಪಣ್ಣ, ಅಧ್ಯಕ್ಷ ಹೆಚ್.ಎಸ್. ಜಿಮ್ಮ ಸುಬ್ಬಯ್ಯ, ಉಪಾಧ್ಯಕ್ಷ ರಾಜಬಾಬು, ಕಾರ್ಯದರ್ಶಿ ವಿನು, ಸಹ ಕಾರ್ಯದರ್ಶಿ ಸುರೇಶ, ಖಜಾಂಚಿ ಪಿ.ಪಿ. ರಂಜು ಹಾಗೂ ಸದಸ್ಯರುಗಳು ಇದ್ದರು.