ಮಡಿಕೇರಿ, ನ. ೪: ಚೇರಂಬಾಣೆ ಬೇಂಗೂರು ಗ್ರಾಮದ ಪಟ್ಟಮಾಡ ಕುಟುಂಬಸ್ಥರ ಐನ್‌ಮನೆಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ತೆರೆ ಕಾರ್ಯ ಇತ್ತೀಚೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕುಟುಂಬದವರು ಮಾತ್ರವಲ್ಲದೆ ಸ್ಥಳೀಯ ಗ್ರಾಮ ವ್ಯಾಪ್ತಿಯ ಕುಟುಂಬಸ್ಥರಾದ ತೇಲಪಂಡ, ಕಲ್ಮಾಡಂಡ, ಇಂದAಡ, ಕುಂಚೆಟ್ಟಿರ, ಪೊನ್ನಚೆಟ್ಟೀರ ಸೇರಿದಂತೆ ಊರಿನವರು, ಬಂಧುಮಿತ್ರರು, ತವರು ಮನೆ ಹುಡುಗಿಯರು ಭಾಗಿಗಳಾಗಿದ್ದರು. ಮಲೆಯ ಜನಾಂಗದವರು ವಿವಿಧ ತೆರೆಗಳ ಮೂಲಕ ಕೈಂಕರ್ಯ ನೆರವೇರಿಸಿದರು.