ನಾಪೋಕ್ಲು, ನ. ೪: ನಾಪೋಕ್ಲು ನಗರದಲ್ಲಿ ಯಾವುದೇ ಲೈಸನ್ಸ್ ಮತ್ತು ದಾಖಲಾತಿಯನ್ನು ಹೊಂದದೆ ಆಟೋ ರಿಕ್ಷಾಗಳು ಓಡಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಆರ್.ಟಿ.ಓ. ಇಲಾಖೆ ಕ್ರಮ ಕೈಗೊಳ್ಳಬೇಕೆಂದು ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಇ. ಅಬ್ದುಲ್‌ರಜಾಕ್ ಠಾಣಾಧಿಕಾರಿಗಳಿಗೆ ಮತ್ತು ಸಂಬAಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕ ದೂರು ನೀಡಲಾಯಿತು. ಸಂಘದಲ್ಲಿ ಸುಮಾರು ೭೬ ಸದಸ್ಯರಿದ್ದು, ಅವರು ಲೈಸನ್ಸ್ ಮತ್ತು ದಾಖಲಾತಿಯನ್ನು ಹೊಂದಿದ್ದು, ಅವರುಗಳು ಸಂಘದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊAಡಿದ್ದಾರೆ. ಉಳಿದಂತೆ ಸುಮಾರು ೫೦ಕ್ಕೂ ಅಧಿಕ ಆಟೋ ರಿಕ್ಷಾಗಳು ಯಾವುದೇ ದಾಖಲಾತಿಯನ್ನು ಹೊಂದದೆ ಓಡಾಡುತ್ತಿವೆ. ಇದರಿಂದ ಸದಸ್ಯರಿಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದು, ಇಂತಹ ಆಟೋಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ತಪ್ಪಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಕೆ.ಕೆ. ಲೋಕೇಶ್, ಸಹ ಕಾರ್ಯದರ್ಶಿ ಕೆ.ಎಂ. ಝಕರಿಯಾ, ಖಜಾಂಚಿ ಕುಂಡ್ಯೋಳAಡ ಸಂಪತ್ ದೇವಯ್ಯ, ಸಲಹ ಸಮಿತಿಯ ಡಿ. ಸದಾನಂದ, ಕೆ.ಎಂ. ರಮೇಶ್ ಇದ್ದರು.