ಸುಂಟಿಕೊಪ್ಪ, ನ. ೪: ‘ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮದ ಅನ್ವಯ ಕುಶಾಲನಗರ ತಹಶೀಲ್ದಾರ್ ಪ್ರಕಾಶ್, ವಿವಿಧ ಇಲಾಖಾಧಿಕಾರಿಗಳು ಪಲಾನುಭವಿಗಳ ಕುಂದುಕೊರತೆ ವಿಚಾರಿಸಿ ಸರಕಾರದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯ ನೀಡುವ ಭರವಸೆ ನೀಡಿದರು.
ತಾ. ೩೦ ರಂದು ಕೊಡಗರ ಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ಬಸವೇಶ್ವರ ದೇವಾಲಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ತಹಶೀಲ್ದಾರ್ ಪ್ರಕಾಶ್ ಕಲ್ಲೂರಿನ ಪರಿಶಿಷ್ಟ ಜಾತಿ ಕಾಲೋನಿಗೆ, ಕಲ್ಲೂರು ಸರಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕುಂದು ಕೊರತೆಗಳನ್ನು ಆಲಿಸಿದರು. ಕಲ್ಲೂರಿನ ಗಿರಿಜನ ಹಾಡಿಯ ೧೦ ಮಂದಿಗೆ ಸರಕಾರದ ದಾಖಲಾತಿ ಹೊಂದಿ ಕೊಳ್ಳಲು ವಾಸಸ್ಥಳ ದೃಢೀಕರಣ ಪತ್ರ ನೀಡಲಾಯಿತು. ೨೦ ಮಂದಿ ಪಿಂಚಣಿದಾರರಿಗೆ ಆದೇಶ ಪ್ರತಿ, ೧೫ ಜನರಿಗೆ ಆಧಾರ್ ಕಾರ್ಡ್ಗಳನ್ನು ವಿತರಿಸಲಾಯಿತು. ಗ್ರಾಮದ ಮೂಲಭೂತ ಸೌಲಭ್ಯಗಳಿಗೆ ಬೇಡಿಕೆಯಾಗಿ ಸಾರ್ವಜನಿಕರಿಂದ ೪೫ ದೂರು ಅರ್ಜಿಗಳನ್ನು ಸ್ವೀಕರಿಸ ಲಾಯಿತು. ಈ ಸಂದರ್ಭ ಅರಣ್ಯ, ಕೃಷಿ, ತೋಟಗಾರಿಕೆ, ಪೊಲೀಸ್, ಸೆಸ್ಕ್, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಯಿಂದ ರೈತರು ಹಾಗೂ ಶ್ರಮಿಕರು ಹಾಗೂ ಸಾರ್ವಜನಿಕರಿಗೆ ಸಿಗುವ ಸೌಲಭ್ಯ ಪಡೆದು ಪಲಾನುಭವಿಗಳು ಒದಗಿಸಬೇಕಾದ ದಾಖಲಾತಿಗಳ ಬಗ್ಗೆ ವಿವರಣೆ ನೀಡಿ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಸಾರ್ವಜನಿಕರು, ಕೃಷಿಕರು ಸಭಾಂಗಣದಲ್ಲಿ ನೆರೆದಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಹಾಗೂ ಸಾರ್ವಜನಿಕರು ಕಂದಾಯ ಇಲಾಖೆಯಿಂದ ಪಹಣಿ, ಪೋಡಿ ತಿದ್ದುಪಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ರಾಷ್ಟಿçÃಯ ಕುಟುಂಬ ನೆರವು ಯೋಜನೆ, ಗ್ರಾಮಗಳಿಗೆ ಸ್ಮಶಾನ ಕಲ್ಪಿಸುವುದು, ಆಶ್ರಯ ಯೋಜನೆಯಲ್ಲಿ ಜಮೀನು ಕಾಯ್ದಿರಿಸುವ ಬಗ್ಗೆ, ಮತದಾನ ಪಟ್ಟಿಯಲ್ಲಿನ ಪರಿಷ್ಕರಣೆ, ಪ್ರಕೃತಿ ವಿಕೋಪದಿಂದ ಹಾನಿಯಾದ ವಾಸದ ಮನೆಗಳಿಗೆ ಮತ್ತು ಬೆಳೆ ಪರಿಹಾರ ಸಕಾಲ ಯೋಜನೆ ಯಡಿಯಲ್ಲಿ ಒದಗಿಸುವ ಸೌಲಭ್ಯಗಳ ಬಗ್ಗೆ ಹದ್ದುಬಸ್ತು, ಪೋಡಿಮುಕ್ತ ಗ್ರಾಮ, ದರಖಾಸ್ತು ಮಂಜೂರಾದ ಜಮೀನುಗಳ ದುರಸ್ತಿ (ನಮೂನೆ೧-೫ ಮತ್ತು ೬-೧೦)ಯನ್ನು ಮಾಡಿ, ಪೋಡಿ ಮಾಡುವ ಬಗ್ಗೆ ಹಾಗೂ ಪಡಿತರ ಚೀಟಿಯಲ್ಲಿನ ಸಮಸ್ಯೆ ನಿವಾರಣೆÀ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಬಗ್ಗೆ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದರು. ಕೃಷಿ ಇಲಾಖೆ, ತೋಟಗಾರಿಕ ಇಲಾಖೆ ಯಿಂದ ವಿತರಿಸಲಾಗುವ ಸೌಲಭ್ಯ ಕೆಲವರಿಗೆ ವಿತರಿಸಲಾಗುತ್ತಿದ್ದು, ಅದನ್ನು ಹೆಚ್ಚಿಸಬೇಕೆಂದು ಕೃಷಿಕರು ಒತ್ತಾಯಿ ಸಿದರು. ಕೊಡಗರಹಳ್ಳಿ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಸುನಿತ್, ಉಪಾಧ್ಯಕ್ಷೆ ಕವಿತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಂಟಿಕೊಪ್ಪ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಶಿವಪ್ಪ, ಕಂದಾಯ ಪರಿವೀಕ್ಷಕ ಪ್ರಶಾಂತ್, ತಾಲೂಕು ಆರೋಗ್ಯ ಅಧಿಕಾರಿ ಯಾದವ್ ಬಾಬು ವಿವಿಧ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು, ಸಹಾಯಕರು ಸೇರಿದಂತೆ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು.