ಮಡಿಕೇರಿ, ನ. ೪: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸಂಪ್ರದಾಯದAತೆ ತೆಪ್ಪೋತ್ಸವವು ತಾ. ೫ ರಿಂದ (ಇಂದಿನಿAದ) ಡಿಸೆಂಬರ್ ೯ ರವರೆಗೆ ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ ಅವರು ತಿಳಿಸಿದ್ದಾರೆ.
ತಾ. ೫ ರಂದು ತುಳಸಿ ಪೂಜೆ ಆರಂಭಗೊಳ್ಳಲಿದೆ. ನವೆಂಬರ್ ೧೬ ರಂದು ಉತ್ಥಾನ ದ್ವಾದಶಿ-ತುಳಸಿ ಪೂಜೆ ಮುಕ್ತಾಯವಾಗಲಿದೆ. ತಾ. ೧೯ ರಂದು ಹುಣ್ಣಿಮೆ ತೆಪ್ಪೋತ್ಸವ ನಡೆಯಲಿದೆ. ತಾ. ೨೦ ರಂದು ಹುತ್ತರಿ ಹಬ್ಬ, ಡಿಸೆಂಬರ್ ೯ ರಂದು ಸುಬ್ರಹ್ಮಣ್ಯ ಷಷ್ಠಿ-ತೆಪ್ಪೋತ್ಸವ ಜರುಗಲಿದೆ ಎಂದು ಅವರು ಹೇಳಿದ್ದಾರೆ.
ಆಯಾಯ ದಿನಗಳಂದು ನಡೆಯಲಿರುವ ಪೂಜಾ ದಿನಗಳಲ್ಲಿ ಸಾರ್ವಜನಿಕ ಭಕ್ತಾದಿಗಳು ದೇಣಿಗೆಯನ್ನು ನೀಡಲಿಚ್ಚಿಸುವವರು ಹಾಗೂ ಪೂಜಾ ಸಮಯದಲ್ಲಿ ತಗಲುವ ವೆಚ್ಚಗಳನ್ನು ಭರಿಸುವ ದಾನಿಗಳು ಸ್ವಇಚ್ಚೆಯಿಂದ ಮುಂದೆ ಬಂದಲ್ಲಿ, ಮೊಬೈಲ್ ೯೯೮೦೭೨೪೨೨೨, ೯೦೬೩೦೯೦೩೩೯ ಸಂಖ್ಯೆಯನ್ನು ಸಂಪರ್ಕಿಸಬಹುದು.