ಕೂಡಿಗೆ, ನ. ೪: ಕರ್ನಾಟಕ ಲೋಕಾಯುಕ್ತ ಮಡಿಕೇರಿ ಜಿಲ್ಲಾ ಕೇಂದ್ರ ಇವರ ವತಿಯಿಂದ ಕುಶಾಲನಗರ ತಾಲೂಕು ಕಚೇರಿಯಲ್ಲಿ ಜಾಗೃತಿ ಅರಿವು ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಪ್ರಭಾಕರ್ ಅವರು ಲಂಚ ವಿರೋಧ ತೆಗೆದುಕೊಳ್ಳುವ ನಿಯಮದ ಪ್ರತಿಜ್ಞೆಯನ್ನು ಭೋದಿಸಿದರು.
ಈ ಸಂದರ್ಭ ಮಡಿಕೇರಿ ಲೋಕಾಯುಕ್ತ ಪೊಲೀಸ್ ಡಿವೈಎಸ್‌ಪಿ ಪ್ರಭಾಕರ್, ಕುಶಾಲನಗರ ಉಪ ತಹಶೀಲ್ದಾರ್ ಮಧುಕುಮಾರ, ಕಂದಾಯ ನಿರೀಕ್ಷಕ ಸಂತೋಷ್ ಸೇರಿದಂತೆ ಕುಶಾಲನಗರ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಲೆಕ್ಕಾಧಿಕಾರಿಗಳು ಮತ್ತು ತಾಲೂಕು ಮತ್ತು ನಾಡ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.