ನಾಪೋಕ್ಲು, ನ. ೪: ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಅಂರ‍್ರಾಷ್ಟಿçÃಯ ಮಟ್ಟದ ಚಿತ್ರಕಲಾ ಸ್ಪರ್ಧೆ “ಪೀಸ್ ಪೋಸ್ಟರ್ ಕಂಟೆಸ್ಟ್” ನಡೆಯಿತು. ೧೧ ರಿಂದ ೧೩ ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಈ ವ್ಯಾಪ್ತಿಯ ಶಾಲೆಗಳ ೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಅಂಕುರ್ ಪಬ್ಲಿಕ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಚೆರುವಾಳಂಡ ಅನನ್ಯ ಅಯ್ಯಪ್ಪ ಪ್ರಥಮ ಸ್ಥಾನಗಳಿಸಿದರೆ, ಅಂಕುರ್ ಪಬ್ಲಿಕ್ ಶಾಲೆಯ ೭ ನೇ ತರಗತಿ ವಿದ್ಯಾರ್ಥಿನಿ ಉಮಾ ಅಬೀಬ್ ದ್ವಿತೀಯ ಮತ್ತು ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಕಿರೀಟ್ ಸೋಮಯ್ಯ ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಮುಕ್ಕಾಟಿರ ವಿನಯ್, ಕಾರ್ಯದರ್ಶಿ ಕೇಟೋಳಿರ ರತ್ನಾ ಚರ್ಮಣ್ಣ, ಖಜಾಂಚಿ ಕೇಟೋಳಿರ ಕುಟ್ಟಪ್ಪ, ಪದಾಧಿಕಾರಿಗಳಾದ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಕೇಲೇಟಿರ ದೀಪು ದೇವಯ್ಯ, ಮತ್ತಿತರರು ಇದ್ದರು.